ನಿನ್ನ ಕೆನ್ನೆಯ ಗುಳಿ ಮನಮೋಹಕ
ನನ್ನ ಕೆನ್ನೆಯದೋ- ಭಯಾನಕ
ನಿನ್ನ ತೊದಲ ನುಡಿಗೆ ಮನೆಯೆಲ್ಲ ಸಂಭ್ರಮ
ನನ್ನ ತೊದಲ ಕೇಳುವರಿಲ್ಲ ಹೇಳುವರಿಲ್ಲ
ನಿನ್ನ ಅಳು ನಿಲಿಸಿಲು ಮನೆ
ಮಂದಿಯದೆಲ್ಲ ಸರ್ಕಸ್
ನನ್ನ ಅಳು ಅರಣ್ಯ ರೋದನ
ನಿನ್ನ ಅಪ್ಪ ಅಮ್ಮನ ಪ್ರಾಣ ನೀನು
ನನ್ನ ಅಪ್ಪ ಅಮ್ಮ , ಎಲ್ಲಿ
ನೆನಪೂ ಇಲ್ಲ
ಆದರೂ ಮಗೂ
ಎಲ್ಲ ಸುಖ ನಿನಗಿರಲಿ
ನಿನ್ನ ನೋಡುವ
ಭಾಗ್ಯವೆ ಎನಗೆ ಸಾಕು
Comments
Post a Comment