Skip to main content

Posts

Showing posts with the label #poem

ಸೇಲ್

ಎಲ್ಲೆಲ್ಲೂ ಹಬ್ಬ ಭರ್ಜರಿ ಮಾರಾಟ - ಸೀರೆ ಯಿಂದ ಚಡ್ಡಿಯ ತನಕ ಗೊಂಬೆಯಿಂದ ಗಾಡಿಯ ತನಕ ೫೦-೬೦-೭೦ ಪ್ರತಿಶತ ಕಡಿತ   ನಾನು ಅಲ್ಲೆಲ್ಲ ಹುಡುಕಿದೆ ಎಲ್ಲೆಲ್ಲ ಹುಡುಕಿದೆ ಒಂದು ಚೂರು ಖುಷಿ, ಸ್ವಲ್ಪ ನೆಮ್ಮದಿ, ಇಷ್ಟೇ ಇಷ್ಟು ಸಮಾಧಾನ   ಸಿಗಲೇ ಇಲ್ಲ ಎಲ್ಲೂ ಸಿಗುತ್ತಿಲ್ಲ -ಸ್ಟಾಕ್ ಇಲ್ಲ  ಯಾವಾಗ ಬರುವದೋ ಗೊತ್ತಿಲ್ಲ  

I, too - Langston Hughes

  I, Too Langston Hughes , 1902 - 1967 I, too, sing America. I am the darker brother. They send me to eat in the kitchen When company comes, But I laugh, And eat well, And grow strong. Tomorrow, I'll be at the table When company comes. Nobody'll dare Say to me, "Eat in the kitchen," Then. Besides, They'll see how beautiful I am And be ashamed— I, too, am America.

ನಿನ್ನ ತಪ್ಪು

 ನಿನ್ನ ತಪ್ಪು, ಇನ್ನೂ ಚೆನ್ನಾಗಿ ಮೈ ಮುಚ್ಚಿಕೋಬೇಕಿತ್ತು. ಅವರು ಸೀಟಿ ಹೊಡೆಯುವಂತೆ ಮಾಡಿದೆಯಲ್ಲ, ನಿನ್ನ ತಪ್ಪು ನಿನ್ನ ತಪ್ಪು, ಕತ್ತಲೆ ಆದ ಮೇಲೆ ಹೊರ ಹೋದ್ಯಲ್ಲಾ ಅವರು ಅಸಹ್ಯ ವರ್ತಿಸುವಂತೆ ಮಾಡಿದೆಯಲ್ಲಾ, ನಿನ್ನ ತಪ್ಪು. ನಿನ್ನ ತಪ್ಪು ,ಕಾಗದ ಪತ್ರ ಸರೀ ಇದೆ ಎಂದು ಮನೆ ಕೊಂಡ್ಯಲ್ಲ   ಅನಧಿಕೃತ  - ಕೋರ್ಟು ಕಛೇರಿ ಸುತ್ತಬೇಕು. ಎಲ್ಲಿ ಬುಲ್ ಡೋಜರ್ ಬರತ್ತೋ  ನಡುಗುತ್ತಾ ಇರಬೇಕು, ನಿನ್ನ ತಪ್ಪು ನಿನ್ನ ತಪ್ಪು, ಸೇತುವೇ ರಿಪೇರಿ ಮಾಡಿದ್ದಾರೆ  ನೋಡಲು ಬಂದ್ಯಲ್ಲಾ ಸುಮ್ಸುಮ್ನೆ ಸತ್ ಹೋದೆ. ನಿನ್ನ ತಪ್ಪು. 

ಹಿಂಬಾಲಿಸದಿರು

  ನತಮಸ್ತಕಳಾಗಿ ಭೂಮಿಯನೇ ನೋಡುತ್ತ ಹಿಂಬಾಲಿಸದಿರು   ಮನುಜೆ ಈ   ದಾರಿ   ನಿನದಲ್ಲ ಈ   ರಸ್ತೆ   ನಿನಗಲ್ಲ ಹಿಂಬಾಲಿಸದಿರು   ಮನುಜೆ   ಸುತೆಯಾಗಿ   ಸತಿಯಾಗಿ ಆಜ್ಞಾಪಾಲಕಿಯಾಗಿ ಬುದ್ದಿಯನು   ಕಟ್ಟಿಟ್ಪು   ಹಿಂಬಾಲಿಸದಿರು   ಮನುಜೆ ಅವರು   ಹೇಳಿದರೆಂದು ಇವರು   ಕಲಿಸಿದರೆಂದು ಅಪ್ಪ   ನೆಟ್ಟ   ಆಲದಮರವೆಂದು ಅರ್ಥವಿಲ್ಲದ   ಆಚರಣೆ ಹಿಂಬಾಲಿಸದಿರು   ಮನುಜೆ ದೈವವ   ದೂರದೆ   ಇತರರ   ದೂರದೆ ಕಾರಣವ   ಹುಡುಕು   ನೀ ಹಿಂಬಾಲಿಸದಿರು   ಮನುಜೆ

ರೋಧನ

ಪಾಂಚಲೀ, ತಡೆಯಲಿಲ್ಯಾಕೆ ನನ್ನ  ಈ ಕ್ರೂರ ಯುದ್ಧ ಮಾಡದಂತೆ? ಬೇಕಿರಲಿಲ್ಲ ನಮಗೀ ರಾಜ್ಯ  ಹೋಗಲಾರೆ ರಸ್ತೆಯಲಿ  ರುಂಡ ಮುಂಡ ಕೈ ಕಾಲುಗಳು  ಕೂಗುತ್ತಿವೆ  ಮಹಾರಾಜ ಎಲ್ಲಿ ನಮ್ಮ ಪ್ರಾಣ  ಕೂರಲಾರೆ ಸಿಂಹಾಸನದಲಿ  ಮುತ್ತಜ್ಜನ ಶಯ್ಯೆಯ ಬಾಣಗಳು ಚುಚ್ಚುತ್ತಿವೆ   ಯಾರೋ ಅಳುತ್ತಿದ್ದಾರೆ  ಅಮ್ಮ ನೋವೂ  ತುತ್ತು ಅನ್ನ ಉಣಲಾರೆ  ಅಪ್ಪ ನನಗೂ ಎನ್ನುವ ಮಕ್ಕಳು  ಎಲ್ಲಿ ಎಲ್ಲಿ ? ಬರೀ ಭ್ರಮೆ  ಭೀಮಾರ್ಜುನರ ಬಳಿ ಹೋಗಲಾರೆ  ಅವರ ದೀನ ನಿಶ್ಶಬ್ದ ಅಳಲು  ನಮ್ಮ ಮಕ್ಕಳೆಲ್ಲಿ ಅಣ್ಣಾ  ಹದಿನೆಂಟು ಅಕ್ಷೋಹಿಣಿ ನಿಷ್ಪಾಪಿಗಳ  ಹತ್ಯೆಯ ಪಾಪ  ತೊಳೆಯಲಿ ಯಾವ ಗಂಗೆಯಲಿ ? ನೀನ್ಯಾಕೆ ತಡೆಯಲಿಲ್ಲವೇ  ಪಾಂಚಾಲಿ  ಈ ಕ್ರೂರ ನರಹತ್ಯೆಯ ?

Savior

 Make me a good person I prayed ever  But HE would not  change his script Some ridiculed Some laughed Many insulted Few feared I cry in my sleep Please save me But HE does not change his script His message "I will change your life iff (if and only if) you change your fear" A little bit of confidence  A little bit of security A lot of empathy Is all I need 

ಬೇಟೆ

 ಆಡು ಹುಲಿಯ ಆಟ  ಬೇಟೆಯ ಚೆಂಡಾಟ  ನೋಡಲು ಎಷ್ಟು ಚೆಂದ  ಹುಲಿಯು ಆಡನು ಹೊಡೆದು  ಕತ್ತನೇ ಕತ್ತರಿಸೆ  ವಾ ವಾ ಎಷ್ಟು ಶೌರ್ಯ   ಆಡು ತಿಂದ ಹುಲಿ ಇತ್ತ  ತಿರುಗಿ ನಮ್ಮೆಡೆಗೆ  ಬರಬಹುದೇ? ಛೆ ಬರಲಿಕ್ಕಿಲ್ಲ  ಅದು ನಮ್ಮ ಹುಲಿ

ಚಕ್ರವ್ಯೂಹ

 ನಾವೆಲ್ಲಾ ಚಕ್ರವ್ಯೂಹದಲ್ಲಿ   ಹೊರಗೆ ಬರಲಾರೆವು  ಒಳಗೋ ಕತ್ತಿ ಖಡ್ಗಗಳ ರಭಸ  ಎಲ್ಲೆಲ್ಲೂ ರಕ್ತ    ನಮ ಕೈಗೂ ಯಾರೋ ಖಡ್ಗ  ಕೊಡುವರು  ಯಾರೋ ಮುಂದೆ ದೂಡುವರು  ಯಾರು ಶತ್ರು ಯಾರು ಮಿತ್ರ  ತೋಚದು  ಯಾರ ಕೊಲ್ಲುವದು ಯಾರ ಕಾಯುವದು  ತಿಳಿಯದು    ಹೊರ ಬರವದೆಂತು  ದಾರಿ ತೋರುವರಾರು ದೂರ ತಳ್ಳುವರಾರು  ತಿಳಿಯದು

ವ್ಯೂಹ

ಅವಳು ಅರಿಯಳು ಅರಿಯು ಯಾರೆಂದು ಬಲ್ಲಳವಳು  ಚಕ್ರವ್ಯೂಹವೆಂದು ಹಿಂದೆ ಖಡ್ಗ ಹಿಡಿದು ನಿಂತಿಹರೆಂದು ಸುತ್ತಲಿಹರೆಲ್ಲ ಶತ್ರುಗಳು ಮಿತ್ರರೆಲ್ಲಿ ಆಪ್ತರೆಲ್ಲಿ ಬರೀ ಭ್ರಮೆಯೆಂದು ಹೊರಬರಲು ಅಸಾಧ್ಯ ಬರದಿರಲು ಅಂತ್ಯ ಕುಗ್ಗಿ ಕುಬ್ಜವಾಗಿ ಮಾಯವಾಗುವಳವಳು ಮರು ದಿನ ಮತ್ತೆಲ್ಲ ಮರೆತು ಮರೀಚಿಕೆಯ ಹುಡುಕಿ ಹೊರಡುವಳು 

Invisible

  October 09, 2017      He was lying there Next to foot path In front of a bus-stop But was invisible Was he drunk Or doped Simply asleep Feeling safer Among people We don't know He was invisible No one tried to wake him No one tried to chase him No one even looked at him He was invisible Mother might be praying Child might be dreaming Of dolls he may bring Unaware, he was In a bliss Invisible to all No sympathy from anyone No empathy Not even disgust He did not get a glance In a corner Of a busy road He was lying down Invisible to all

Aging by Maya Angelou

 As you might have guessed, I am copy pasting very many (plurimi) posts from my earlier blog. As I was the owner, I need not worry about copy right. This is a poem by Maya Angelou  

I know why the caged bird sings

I Know Why The Caged Bird Sings The free bird leaps on the back of the wind and floats downstream till the current ends and dips his wings in the orange sun rays and dares to claim the sky. But a bird that stalks down his narrow cage can seldom see through his bars of rage his wings are clipped and his feet are tied so he opens his throat to sing. The caged bird sings with fearful trill of the things unknown but longed for still and his tune is heard on the distant hill for the caged bird sings of freedom The free bird thinks of another breeze and the trade winds soft through the sighing trees and the fat worms waiting on a dawn-bright lawn and he names the sky his own. But a caged bird stands on the grave of dreams his shadow shouts on a nightmare scream his wings are clipped and his feet are tied so he opens his throat to sing The caged bird sings with a fearful trill of things unknown but longed for still and his tune is heard on the distant...

Devavrata

  ನವಜಾತ ಶಿಶುವ ಹೊಳೆಗೆಸೆದ  ಅಮ್ಮ ನೂ ಅಪ್ಪನೂ ಆಗಿ ಸಾಕಿದ ತಂದೆಯೂ ತನ್ನಷ್ಟೇ ಎತ್ತರದ ಮಗನೆದುರು ಪ್ರೇಮ ರೋಗವೆಂದು ಅಳಲಿದಾಗ ಏನು ಮಾಡಬೇಕಿತ್ತು ಈ ದೇವವ್ರತ ಭೀಷ್ಮನಾಗದೇ ?   ತೊಟ್ಟ  ಭೀಷ್ಮ  ಶಪಥವ  ಹೊಗಳಿದಾಗ ಎದೆಯುಬ್ಬಿತ್ತು  ಇಂತಹ   ತ್ಯಾಗಿ  ಮನೋ ನಿಗ್ರಹಿ  ಇರಬಲ್ಲರೆ ?  ಅರಿಯದ   ಮುಗುದ  ಮಕ್ಕಳ  - ಅಪ್ಪನ  ಮಕ್ಕಳ ಸಾಕಿ  ಸಲಹಿದೆ  ರಾಜ ಕುವರಿಯರ ಗೆದ್ದು  ತಂದು  ಅವರ  ಮದುವೆಯ  ಮಾಡಿದೇ   ಫಲ   ಅಂಬೆಯ ಶಾಪ    ಇಂದು  ಅವರ  ಮೊಮ್ಮಕ್ಕಳು ಒಬ್ಬರನ್ನೊಬ್ಬರು  ಕೊಲ್ಲಲು  ಹೊರಟಾಗ ಕಣ್ಣೀರು  ಹೊರಬಾರದು  ಬಾರದಿರದು  ಇವರ ಪ್ರಶ್ನಿಸಲು ನಾನಿವರ ಅಜ್ಜನೆ? ಅಲ್ಲ, ಇವರು ನನ್ನ   ಸಂತಾನವಲ್ಲ.   ಅಖಿಲ ಜೀವ  ಜನ್ತುಗಳೆಲ್ಲ   ಸಂತಾನಕ್ಕಾಗಿಯೇ   ಬದುಕಿ    ಸಾಯುವಾಗ   ಯಾವ ಸಾರ್ಥಕತೆಗೆ   ಈ ಪ್ರತಿಜ್ಞೆ?   ಈ  ಬಾಳು ?