Breathe - into the shadows
Breathe - Into the shadows ಇದು ಅಮೆಝಾನ್ ಪ್ರೈಮ್ ನಲ್ಲಿ ಬಿತ್ತರವಾಗುತ್ತಿರುವ ಧಾರವಾಹಿ. ಮೊದಲೆರಡು ಕಂತುಗಳನ್ನು ನೋಡಿ ನನಗೆ ತುಂಬಾ ಚೆನ್ನಾಗಿದೆ ಅನಿಸಿತ್ತು. ಆಮೇಲೆ ಕಥೆಯು ದುರ್ಬಲವಾಗುತ್ತಾ ಹೋಯಿತು. ಅವಿನಾಶ್ ಒಬ್ಬ ಪ್ರಸಿದ್ಧ ಸೈಕಿಯಾಟ್ರಿಸ್ಟ್.. ಅವನ ಹೆಂಡತಿ ಆಭಾ ಫೈವ್ ಸ್ಟಾರ್ ಹೋಟೆಲಲ್ಲಿ ಶೆಫ್. ಮುದ್ದಾದ ಮಗಳು ಸಿಯಾ , ಸುಂದರ, ವಿಶಾಲ ಮನೆ. ಸುಖಿ ಜೀವನ ನಡೆಸುತ್ತಿದ್ದಾನೆ ಅವಿ. ಆದರೆ ಒಂದು ದಿನ ಅವನ ಬದುಕು ತಲೆಕೆಳಗಾಗಿಬಿಡುತ್ತದೆ. ಗೆಳೆಯರ ಮಗುವಿನ ಹುಟ್ಟುಹಬ್ಬಕ್ಕೆ ಮಗಳನ್ನು ಬಿಟ್ಟು, ತಾನು ಅಲ್ಲೇ ಪಕ್ಕದ ಹೋಟೆಲಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾಗ - ನಮ್ಮ ಖಳನಾಯಕ ಬರುತ್ತಾನೆ. ಕಾಲು ಎಳೆಯುತ್ತ. ಬಂದು ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೊರಟುಹೋಗುತ್ತಾನೆ. ಅವಿನಾಶ್, ಅಭಾ ಊರೆಲ್ಲ ಹುಡುಕುತ್ತಾರೆ. ಪೊಲೀಸ್ ಕಂಪ್ಲೇಂಟ್ ಕೊಡುತ್ತಾರೆ. ಪೊಲೀಸರು ಬಹಳ ಹುಡುಕುತ್ತಾರೆ. ಆಭಾ ರಸ್ತೆ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸುತ್ತಾಳೆ. ಆದರೂ ಸಿಯಾನ ಪತ್ತೆಯಿಲ್ಲ. ಒಂಬತ್ತು ತಿಂಗಳ ನಂತರ ಅವರ ಮನೆಗೆ ಒಂದು ಪಾರ್ಸಲ್ ಬರುತ್ತದೆ. ಅದರಲ್ಲಿ ಒಂದು ಐಪ್ಯಾಡ್ . ಅದರಲ್ಲೊಂದು ವಿಡಿಯೋ. ಸಿಯಾ ಮತ್ತು ಅವಳ ಜೊತೆ ಇನ್ನೊಬ್ಬ ಕಿಡ್ನಾಪ್ ಆಗಿರುವ ಯುವತಿ ಮಾತಾಡುವ, ಆಟ ಆಡುವ, ಸಿಯಾಗೆ ಆ ಯುವತಿ (ಅವಳು ಮೆಡಿಕಲ್ ಸ್ಟೂಡೆಂಟ್) ಡಯಾಬಿಟಿಸ್ ಇಂಜೆಕ್ಷನ್ ಕೊಡುವ ವಿಡಿಯೋಗಳು. ಇನ್ನೊಂದು ವಿಡಿಯೋದಲ್ಲಿ ...