ಸಮತೋಲನ

 

 

ಇದೊಂದ್ ಶಬ್ದದ ಸಲುವಾಗಿ ನಾನು ಈ ಪೋಸ್ಟನ್ನ ಕನ್ನಡದಲ್ಲಿ ಬರೀಬೇಕಾಗಿ ಬಂತು.

ನಂಗೊಂದ್ ಮೆಸೇಜ್ ಬಂತು - ನಿಮ್ಮ ಸಮತೋಲನ ಮತ್ತು ಇತರ ವಿವರಗಳನ್ನ ತಿಳಿಯಲು http:yavudoondutinryurl  ನ್ನು ಕ್ಲಿಕ್ ಮಾಡಿರಿ

ಸಮತೋಲನವಾ? ಯಾರಿಗೆ? ಸರೀ ಎಣ್ಣೆ ಹಾಕಿ ಟೈಟ್ ಆದವರಿಗಾ?

ಹೇಗೆ ಅವರು ಸಮತೋಲನ ನೋಡ್ತಾರೆ? ಆ ವೆಬ್ ಸೈಟ ಓಪನ್ ಮಾಡಿ ಆಮೇಲೆ ಫೋನ್ ಮೇಲೆ ಒಂದ್ ಕಾಲಲ್ಲಿ ನಿಲ್ಬೇಕಾ?

ಹಾಗೆಲ್ಲ ಯಾರೂ ಮಾಡೋದಿಲ್ಲ. ಜನಾ ಅಷ್ಟೆಲ್ಲಾ ದಡ್ದರಲ್ಲಾ. ಫೋನ್ ವಿಷಯದಲ್ಲಂತೂ ಸಿಕ್ಕಾಪಟ್ಟೆ ಸ್ಮಾರ್ಟ್ ಆಗೇ ಇರ್ತಾರೆ.

ಅದಲ್ಲ ಅಂದ್ರೆ ಇನ್ನ ಹೇಗೆ ಸಮತೋಲನಾ ನೋಡ್ತಾರೆ? ತಲೆ ಮೇಲೆ ಫೋನ್ ಇಟಗೊಂಡು ಆ ಸೈಟ ಓಪನ್ ಮಾಡಿದ್ರೆ ಅದು ಹೇಳತ್ತಾ - "ನೀವ್  ಹಾಕಿದ ಎಣ್ಣೆ ಎಲ್ಲೋ ಡೂಪ್ಲಿಕೇಟ್ ಇರ್ಬೇಕು. ನೀವ್  ಇನ್ನು ಪೂರ್ತಿ ಓಲಾಡ್ತಾ ಇಲ್ಲ. "

ಆದ್ರೆ ಸಮತೋಲನ ನೋಡೋ ಅವಶ್ಯಕತೆ ಇರೋವ್ರಿಗೆ ಸಮತೋಲನದ್ ಮೇಲೆ ಡೌಟ್  ಇರತ್ತೆ. ಅವ್ರು ಯಾವ ಧೈರ್ಯದ ಮೇಲೆ ಅಷ್ಟೆಲ್ಲ ಬೆಲೆ ಬಾಳೋ ಫೋನ್ ತಲೆ ಮೇಲಿಂದ ಬೀಳ್ಸೋಕೆ ರೆಡಿ ಆಗ್ತಾರೆ?

ಓ ಕೆ.  ಆ ಮೆಸೇಜು ಬಂದಿದ್ದು ಜಿಯೋದಿಂದಾ. ಅವರು ಹೇಳ್ತಾ ಇರೋ ಸಮತೋಲನ ಇಂಗ್ಲಿಷಿನ ಬ್ಯಾಲೆನ್ಸ್.  ಕರೆನ್ಸಿ ಬ್ಯಾಲೆನ್ಸ್.

ಸುಮ್ನೆ ತಲೆ ತಿಂದು ನಿಮ್ಮ ಸಮತೋಲನ ತಪ್ಪಿಸಿ ಬಿಟ್ನಾ? ಸಾರಿ.

Comments

Popular posts from this blog

ಹೂಗಳು

ಎಮ್ಮೆ

Qui scribit bis legit