ನಾವೆಲ್ಲಾ ಚಕ್ರವ್ಯೂಹದಲ್ಲಿ
ಹೊರಗೆ ಬರಲಾರೆವು
ಒಳಗೋ ಕತ್ತಿ ಖಡ್ಗಗಳ ರಭಸ
ಎಲ್ಲೆಲ್ಲೂ ರಕ್ತ
ನಮ ಕೈಗೂ ಯಾರೋ ಖಡ್ಗ
ಕೊಡುವರು
ಯಾರೋ ಮುಂದೆ ದೂಡುವರು
ಯಾರು ಶತ್ರು ಯಾರು ಮಿತ್ರ
ತೋಚದು
ಯಾರ ಕೊಲ್ಲುವದು ಯಾರ ಕಾಯುವದು
ತಿಳಿಯದು
ಹೊರ ಬರವದೆಂತು
ದಾರಿ ತೋರುವರಾರು ದೂರ ತಳ್ಳುವರಾರು
Comments
Post a Comment