ಸಂತೆಯೊಳಗೊಂದು
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕೆ ನಾಚಿದೊಡೆಂತಯ್ಯ ?
ನಿಜ. ಹೈವೆ ಪಕ್ಕದಲ್ಲಿ ಮನೆಮಾಡಿ ದಿನ ಬೆಳಗಾದರೆ - ಬೆಳಗಾಗುವ ಎಷ್ಟೋ ಮೊದಲೇ ಗಾಡಿಗಳು ಪ್ಯಾ ಎಂದೋ ಪೆಪೆಪೇ ಎಂದೋ ಕೂಗುತ್ತವೆ ಎಂದು ದೂಷಿಸಲಾಗುತ್ತದೆಯೇ?
ನಡುರಾತ್ರಿಯಲ್ಲಿ ವಾಹನಗಳ ವ್ರನ್ದಗಾನಕ್ಕೆ ನಾವು ಶತಸಾಹಸ ಮಾಡಿ ಬಾರಿಸಿಕೊಂಡ ನಿದ್ರೆ ಬಲಿಯಾದರೆ ತಪ್ಪು ಯಾರದು? ರಸ್ತೆಗೆ ಇಳಿದು ಅವರನ್ನು ಅಡ್ಡಗಟ್ಟಿ ಅವರ ಬಾಯಿ /ಹಾರ್ನು ಮುಚ್ಚಿಸಲಾಗುವದಾ?
ಪಾಡ್ಕಾಸ್ಟ್ ಕೇಳಿ, ಯೂಟ್ಯೂಬ್ ನೋಡಿ, ಕಡೆಗೆ ರಾಮ ನಾಮ ಸ್ಮರಣೆಯನ್ನೂ ಮಾಡಿ, ಮುದ್ರೆ ಮಾಡಿ, ಅನುಲೋಮ ವಿಲೋಮ ಇನ್ನೋಂದುಲೋಮ ಮಾಡಿ, ಅಂತೂ ಇಂತೂ ಬಂದ ನಿದ್ರೆ ನಾಶವಾಯಿತಾ ? ಪಾಪಿಗಳು, ಪಾಪಿಗಳು. ಮುಂದಿನ ಜನ್ಮದಲ್ಲಿ ನಿದ್ರಾಹೀನತೆಯಿಂದ ನನ್ನಂಗೆ ತೋಳಲ್ತಾರೆ.
ಇನ್ನು ಧೂಳೋ , ಕೇಳಲೇ ಬೇಡಿ. ಮನೆಯ ಪ್ರತಿ ಕೋಣೆಯಲ್ಲೂ ದೊಡ್ಡ ದೊಡ್ಡ ಕಿಡಕಿಗಳು. ತೆರೆದರೋ, ಧೂಳಿನ ಪ್ರವಾಹವೇ ಬಂದು ಬಿಡುತ್ತದೆ. ಯಾವ ಸರ್ಫೆಸ್ ನೋಡಿದರೂ ಒಂದಿಂಚು ಧೂಳು.
(ನಾನು ಈ ಧೂಳನ್ನು ರೀ-ಸೈಕಲ್ ಮಾಡುವ ಪ್ಲಾನ್ ಹುಡುಕಬೇಕು, ಬಹುಶ: ನನ್ನ ಗಿಡಗಳಿಗೆ ಮಣ್ಣಾಗಿ )
ಶಬ್ದಕ್ಕೆ ವಾಪಸ್ ಬರೋಣ. ನಮಗೆ ಮನೆ ರಸ್ತೆಯಿಂದ, ಬಸ್ ಸ್ಟಾಪಿನಿಂದ, ಮಾರುಕಟ್ಟೆಯಿಂದ, ಶಾಲೆಗಳಿಂದ, ಆಸ್ಪತ್ರೆಯಿಂದ ತುಂಬಾ ಹತ್ತಿರವಿರಬೇಕು. ತಲೆಗೆ ಒಂದೂವರೆ ವಾಹನವಿದ್ದರೂ ಕೂಡ. ಆದರೆ ರಸ್ತೆಯ ಶಬ್ದಮಾಲಿನ್ಯ, ಪಾಲುಶನ್ ಬೇಡ.ಅದು ಸಾಧ್ಯವಾ?
ಇದು ಪ್ಯಾಕೇಜುಡೀಲ್ ಮಾರಾಯರೆ. ಅನುಕೂಲದ ಜೊತೆ ಪೊಲ್ಲ್ಯೂಷನ್ ಫ್ರೀ.
Comments
Post a Comment