ಭೂತ

ಕತ್ತಲೆಯ ಮಬ್ಬಿನಲಿ 

ಕಾಣುವ ಭೂತಗಳು 

ಬೆಳಕಿನ ಹೊಳಪಲಿ 

ಪುಟ್ಟ ಏಂಜೆಲ್ ಗಳು 

 

ಮತ್ತೆ ಕತ್ತಲಾಗುತ್ತಲೆಲ್ಲ 

ರೂಪಾಂತರ


ಈ ಭೂತಗಳಿಗೆ 

ಮಂತ್ರವಿಲ್ಲ ತಾಯತವಿಲ್ಲ 

ಓಡಿಸಬಲ್ಲ ಮಾಂತ್ರಿಕನಿಲ್ಲ 

 

ಒಮ್ಮೆ ನೋಡಿದರೆ 

ರಕ್ತಬೀಜಾಸುರನಂತೆ 

ಮತ್ತೊಮ್ಮೆ 

ಕೊಳ್ಳಿ  ದೆವ್ವದಂತೆ

 

ಯಾವ ದೈವದ 

ಅವಕೃಪೆಯೋ 

ಯಾರ ಶಾಪದ 

ಉಸಿರೊ 

ಬಿಡಲೊಲ್ಲದು 

ಒಯ್ಯಲೊಲ್ಲದು  


Comments

Popular posts from this blog

ಹೂಗಳು

ಎಮ್ಮೆ

ಸೇಲ್