ವ್ಯೂಹ

ಅವಳು ಅರಿಯಳು
ಅರಿಯು ಯಾರೆಂದು

ಬಲ್ಲಳವಳು  ಚಕ್ರವ್ಯೂಹವೆಂದು
ಹಿಂದೆ ಖಡ್ಗ ಹಿಡಿದು
ನಿಂತಿಹರೆಂದು
ಸುತ್ತಲಿಹರೆಲ್ಲ ಶತ್ರುಗಳು
ಮಿತ್ರರೆಲ್ಲಿ
ಆಪ್ತರೆಲ್ಲಿ ಬರೀ ಭ್ರಮೆಯೆಂದು

ಹೊರಬರಲು
ಅಸಾಧ್ಯ
ಬರದಿರಲು ಅಂತ್ಯ

ಕುಗ್ಗಿ ಕುಬ್ಜವಾಗಿ
ಮಾಯವಾಗುವಳವಳು

ಮರು ದಿನ ಮತ್ತೆಲ್ಲ ಮರೆತು
ಮರೀಚಿಕೆಯ ಹುಡುಕಿ
ಹೊರಡುವಳು 

Comments