ಬುದ್ಧನಾಗಬೇಕು

ಬುದ್ಧನಾಗಬೇಕು

ಅವನು ಕಾಣಲಿಲ್ಲ ಯಾವುದೇ ಕಷ್ಟ
ಮುಪ್ಪು ರೋಗ ಸಾವು
ಪರರ ನೋವನು ನೋಡಿ
ಬುದ್ಧನಾದ
ಅವನದೇ ಸಂಕಟವಾದರೆ?
ಬುದ್ಧನಾಗುತ್ತಿದ್ದನೇ?
ಕ್ರುದ್ಧನಾಗುತ್ತಿದ್ದನೇ?

ಬುದ್ಧನಾಗಬೇಕು

ಅಳುವು ವಿರೂಪ
ಕುರೂಪ
ನಿರಂತರ ಅಳುವು ಕಿತ್ತುಕೊಳ್ಳುವದು
ನಮ್ಮ
ತನವ
ಮನವ
ಒಳ್ಳೆತನವ
ಆದರೂ

ಬುದ್ಧನಾಗಬೇಕು

ನೋವಿಲ್ಲದ ನಲಿವಿಲ್ಲದ
ಚಿಂತೆಯಿಲ್ಲದ
ಅನಂತ ಆಕಾಶದಲ್ಲಿ
ಲೀನವಾಗಬೇಕು
ಬುದ್ಧನಾಗಬೇಕು

ಹೇಗೆ?
ಹೇಳಿಕೊಡಿ
ಒಂದಿಷ್ಟು




Comments

Popular posts from this blog

ಹೂಗಳು

ಎಮ್ಮೆ

ಸೇಲ್