ಪ್ರಶ್ನೆ

ಬೆಳಿಗ್ಗೆ ಎದ್ದು ರೂಢಿಯಂತೆ ಟೆರೇಸಿಗೆ ಹೋದರೆ ಅತಿ ಸುಂದರ ದ್ರಶ್ಯ ನನಗಾಗಿ ಕಾಯುತ್ತಿತ್ತು. ಬಣ್ಣ ಬಣ್ಣದ ಹೂವುಗಳು ಚಿತ್ತಾರ ಬಿಡಿಸಿ ಮುಗುಳ್ನಗುತ್ತಿದ್ದವು.

ತಕ್ಷಣದ ಇನ್ಸ್ಟಿಂಕ್ಟ ಓಡಿ ಹೋಗಿ ಕ್ಯಾಮರಾ - ಕ್ಷಮಿಸಿ  ಮೊಬಾಯ್ಲ ತರೋಣ ಎಂದು. ಇದೂ ಕೂಡ ಒಂದು ರೀತಿಯ ದುರಾಸೆಯೇ!  ಪ್ರಕ್ರತಿಯನ್ನು ಸಹ ಹಿಡಿದಿಟ್ಟುಕೊಂಡು ಜಂಭ ತೋರಬೇಕು ಎನ್ನುವದು!

ಅಥವಾ ನಮ್ಮ ಸೀಮಿತ ಭಾಷಾ ಚಾತುರ್ಯದ  ಪರಿಣಾಮ. ಇದನ್ನು - ಈ ದೈವೀ ಸ್ರಷ್ಟಿಯ ಕೌತುಕವನ್ನು ನಮ್ಮ ಲಿಮಿಟೆಡ್ ಭಾಷಾ ಜ್ನಾನದಿಂದ ಹಿಡಿಯಲು ಸಾಧ್ಯವಿಲ್ಲ. ಕನಿಷ್ಟ ಚಿತ್ರದಲ್ಲಾದರೂ ಹಿಡಿಯೋಣ, ಎಂಬ -  ಭ್ರಮೆ.

ಆಗಸದ ತಾರೆಗಳು ಕೆಳಗಿಳಿದು ಭುವಿಯ ಅಲಂಕರಿಸಿದಂತಿರುವ ಮಲ್ಲಿಗೆಯ ಸಂಭ್ರಮ. ನಾನು ಇನ್ನೂ ಚಿಕ್ಕವಳು ಎಂದು ಜಂಭದಿಂದ ಕೆನ್ನೆಯುಬ್ಬಿಸಿಕೊಂಡು ಕುಳಿತಿರುವ ಗುಲಾಬಿ, ಹೂವ್ಯಾಕೆ ನಾನು ಮೊಗ್ಗನೆ ಪೋಣಿಸಿ ಮಾಲೆ ಹೆಣೆದಿರುವೆ ಎನ್ನುತ್ತಿರವ ರತ್ನ ಗೆಂಟಿಗೆ.

ಎಲ್ಲವೂ ಕೇಳಿದವು ಒಂದೇ ಪ್ರಶ್ನೆಯ  - ಈ ದೈವೀ ಸೌಂದರ್ಯ ಸಿಕ್ಕೀತೇ ನಿನ್ನ ಮರುಳು ಮೊಬಾಯ್ಲಲ್ಲಿ ?

Comments

Popular posts from this blog

ಹೂಗಳು

ಎಮ್ಮೆ

ಸೇಲ್