There is much cliched quote “you can fool all the people for some time. You can fool some people all the time. But you can’t fool all the people all the time “
ನಿಮಗೆ ರಾಬಿನ್ ಹುಡ್ ಕಥೆ ಗೊತ್ತೆ? ಅವನು ಶ್ರೀಮಂತರನ್ನು ಲೂಟಿ ಮಾಡಿ ಆ ಹಣವನ್ನು ಬಡವರಿಗೆ ಹಂಚುತ್ತಿದ್ದನಂತೆ. ಈಗಿನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಆರಿಸಿ ಬಂದು ಸರಕಾರ ರಚಿಸಿದರೆ ಅವರು ಈ ಕೆಲಸವನ್ನೇ ಮಾಡುತ್ತಾರಾ? ನಿಮ್ಮ ಮನೆಯಲ್ಲಿ ಎರಡು ಎಮ್ಮೆ ಇದ್ದಾರೆ ಒಂದನ್ನು ತೆಗೆದುಕೊಂಡು ಹೋಗಿ 'ಅವರಿಗೆ' ಕೊಡುತ್ತಾರಾ ? ನಿಮ್ಮ ಮನೆಯ ಹೆಂಗಸರ ಮಂಗಳಸೂತ್ರವನ್ನೂ ಸಹ ಕಸಿದು 'ಅವರಿಗೆ' ಕೊಡುತ್ತಾರಾ? ಅವರು ಎಂದರೆ ಗೊತ್ತಾಗಲಿಲ್ಲವಾ - ಅದೇ ನಮ್ಮ ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದವರು, ಬಹಳ ಮಕ್ಕಳನ್ನು ಮಾಡಿಕೊಳ್ಳುವವರು. ಇನ್ನೂ ಎಷ್ಟು ಬಿಡಿಸಿ ಹೇಳಬೇಕು ನಿಮಗೆ? ಅರವತ್ತಕ್ಕೆ ಅರಳು ಮರುಳು ಎಂದು ಏನೇನೋ ಬರೆಯಬೇಡ ಎಂದಿರಾ? ಪತ್ರಿಕೆಗಳಲ್ಲಿ ಬಂದಿತ್ತಲ್ಲ - ಚುನಾವಣೆ ಪ್ರಚಾರದಲ್ಲಿ ನಮ್ಮ ಪ್ರಧಾನಿಯವರೇ ಹೇಳಿದ್ದಾರೆ ಎಂದು. ಇದು ಸ್ವಲ್ಪ ಡೇಂಜರ್ ಅನಿಸುತ್ತಿದೆ ಅಲ್ವಾ. ಆದರೆ ನಾವು ಯಾವಾಗಲೂ ನಮ್ಮ ಹಿಂದೂ ಧರ್ಮದ ರಕ್ಷಕ ಪಕ್ಷಕ್ಕೆ ವೋಟ್ ಮಾಡಿ ಗೆಲ್ಲಿಸುತ್ತೇವೆ ಬಿಡಿ ಅಂತೀರಾ. ಸ್ವಲ್ಪ ಇತಿಹಾಸ ನೋಡೋಣ. ನೀವು ಅಥವಾ ನಿಮ್ಮ ಪತಿ/ಪತ್ನಿ/ ಮಕ್ಕಳು ನೌಕರಿಯಲ್ಲಿದ್ದೀರಾ? ಹಾಗಾದರೆ ನೀವು ಆದಾಯ ತೆರಿಗೆಯನ್ನು ಇಷ್ಟು ವರ್ಷ ಕೊಡುತ್ತ ಬಂದಿದ್ದೀರಾ. ಆದರೆ ನಿಮ್ಮ ಮನೆಯ ಆಳು, ಡ್ರೈವರ್ ಅಥವಾ ಅಡಿಗೆಯವರು ಆದಾಯ ತೆರಿಗೆ ಕೊಟ್ಟಿದ್ದಾರಾ. ಇಲ್ಲ ತಾನೇ. ಹಾಗಂತ ಸರಕಾರ (ನಿಮ್ಮ ತೆರಿಗೆಯಿಂದ ಬಂದ ದುಡ್ಡಿನಿಂದ) ಕಟ್...
ಎಲ್ಲೆಲ್ಲೂ ಹಬ್ಬ ಭರ್ಜರಿ ಮಾರಾಟ - ಸೀರೆ ಯಿಂದ ಚಡ್ಡಿಯ ತನಕ ಗೊಂಬೆಯಿಂದ ಗಾಡಿಯ ತನಕ ೫೦-೬೦-೭೦ ಪ್ರತಿಶತ ಕಡಿತ ನಾನು ಅಲ್ಲೆಲ್ಲ ಹುಡುಕಿದೆ ಎಲ್ಲೆಲ್ಲ ಹುಡುಕಿದೆ ಒಂದು ಚೂರು ಖುಷಿ, ಸ್ವಲ್ಪ ನೆಮ್ಮದಿ, ಇಷ್ಟೇ ಇಷ್ಟು ಸಮಾಧಾನ ಸಿಗಲೇ ಇಲ್ಲ ಎಲ್ಲೂ ಸಿಗುತ್ತಿಲ್ಲ -ಸ್ಟಾಕ್ ಇಲ್ಲ ಯಾವಾಗ ಬರುವದೋ ಗೊತ್ತಿಲ್ಲ
Comments
Post a Comment