Mangoes

 ಬೇಸಗೆಯೆಂದರೆ ಮಾವಿನಕಾಯಿಯ ಕಾಲ. ನಮ್ಮ ಮನೆಯ ಮರದ ತುಂಬಾ ಬಿಟ್ಟಿರುವ ಕಾಯಿಗಳು  ಬೀದಿಯಲ್ಲಿ  ಓಡಾಡುವ ಮಕ್ಕಳನ್ನ ಆಯಸ್ಕಾಂತದಂತೆ ಆಕರ್ಷಿಸುತ್ತವೆ.

ಹಾಗಾಗಿ  ನಾನು ಒಳಗೆ ನನ್ನ ಕೆಲಸದಲ್ಲಿದ್ದರೂ ಒಂದು ಕಿವಿಯನ್ನ ಹೊರಗೇ ಬಿಟ್ಟು ಬಂದಿದ್ದೆ. ನನ್ನ ಕೆಲಸ - ಟೆಡ್ ವಿಡಿಯೋವನ್ನು ನೋಡುವದು.

ಅದರ ಸದ್ದು ಕೇಳಿತ್ತೇನೋ. ಮಕ್ಕಳು ಹೊರಗೇ ಸ್ವಲ್ಪ ಹೊತ್ತು ಪ್ಲಾನ್ ಮಾಡುತ್ತಾ ಇದ್ದರೇನೋ. ನನಗೆ ಏನೋ ಶಬ್ದ ಕೇಳಿ ಕಿಡಕಿಯಲ್ಲಿ ಹಣಕಿದೆ. ಸುಮಾರು ಹತ್ತು ಪುಟ್ಟ ಮಕ್ಕಳ ದಂಡು ನಮ್ಮ ಕಾಂಪೌಂಡ್ ಗೋಡೇ ಹತ್ತಿರ ಬರುತ್ತಿದ್ದರು. ಕಾಂಪೌಂಡ್ ಹತ್ತಿ ಜಿಗಿಯುವ ಪ್ಲಾನ್ ಇತ್ತೋ ಅಥವಾ ಹೊರಗಿನಿಂದಲೇ ಕಲ್ಲೆಸೆಯುವ ಪ್ಲಾನ್ ಇತ್ತೋ ಗೊತ್ತಿಲ್ಲ.

ನಾನು "ಯಾರದೂ "  ಎಂದು ಕೂಗುತ್ತ ಬಾಗಿಲು ತೆಗೆಯುವದೇ ತಡ, ಆ ದಂಡು ಶರ ವೇಗವಾಗಿ ಓಡಿ ಹೋಯಿತು.

ಈ ಸರ್ಕಸ್ ಪ್ರತಿ ವರ್ಷ ಬೇಸಗೆಯುದ್ದಕ್ಕೂ ನಡೆಯುತ್ತದೆ. ಇಷ್ಟೆಲ್ಲಾ ಕಾದರು, ನಾನು ಮನೆಯಿಂದ ಹೊರ ಹೋದಾಗ ಕಾಯಿಗಳನ್ನೆಲ್ಲ ಕದ್ದು ಬಿಡುತ್ತಾರೆ. ಬಯ್ಯಲೂ  ಮನಸ್ಸು ಬರುವದಿಲ್ಲ.

ಮಕ್ಕಳ ರಜೆ, ಮಾವಿನ ಕಾಯಿಯ ಕಾಲ ಯಾರು ಸಿನ್ಕ್ರೋನೈಜ್ ಮಾಡಿದ್ದರೋ ಗೊತ್ತಿಲ್ಲ.
 

Comments

Popular posts from this blog

ಹೂಗಳು

ಎಮ್ಮೆ

ಸೇಲ್