ಧರ್ಮದ ಉದಯ
ಇಷ್ಟು ವರ್ಷಗಳ ನಂತರ ನನಗೆ ಒಂದು ವಿಷಯ ಸ್ಪಷ್ಟವಾಗುತ್ತಾ ಇದೆ. ಧರ್ಮ-ದೇವರುಗಳ ಮೂಲ ಸಂಸ್ಥಾಪಕಿ ನಮ್ಮ-ನಿಮ್ಮ ಹಾಗೆ ವಯಸ್ಸಾದ ಮಹಿಳೆ. ಜೀಸಸ್ ಅಲ್ಲ, ಬುದ್ಧ ಅಲ್ಲ, ಮಹಮದ್ ಅಲ್ಲ, ಬಸವಣ್ಣನಲ್ಲ. ನೀವು ಖಂಡಿತ ಒಪ್ಪಿಕೊಳ್ಳವದಿಲ್ಲ ತಾನೇ? ಸ್ವಲ್ಪ ವಿಶ್ಲೇಷಿಸಿ ನೋಡೋಣ. ಶಾಂತಮ್ಮ - ಹಾಗೆಂದು ಹೆಸರಿಡೋಣ ನಮ್ಮ ಸಂಸ್ಥಾಪಕಿಗೆ. ಅವಳಿಗೆ ಚಾಲೀಸು, ಪಚಾಸು ಎಲ್ಲ ಯಾವಾಗಲೋ ದಾಟಿದೆ. ಮಕ್ಕಳು-ಮೊಮ್ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಗೂಡು ಸೇರಿದ್ದಾರೆ. ಮನೆಯಲ್ಲಿರವವರು ಅವಳು, ಗಂಡ. ಎಲ್ಲೋ ಒಂದಿಷ್ಟು ಜಿರಲೆ, ಹಲ್ಲಿ, ಇರುವೆಗಳು ಕಂಪನಿ ಕೊಡುತ್ತಿವೆ. ದಿನದಲ್ಲಿ ೩-೪ ಗಂಟೆ ಅಡಿಗೆ-ಕಸ-ಮುಸುರೆ ಮಾಡಿದ ನಂತರ ಅವಳ ಕೈ, ಮನಸ್ಸು ಎಲ್ಲಾ ಖಾಲಿ. ಟಿ.ವೀ., ಮೊಬೈಲ್ ನೋಡುತ್ತ, ಬೇಜಾರಾದರೆ ಗೋಡೆ ನೋಡುತ್ತ ಕುಳಿತು ಅಲ್ಲೇ ನಿದ್ದೆ ಬಂದಿದೆ. ಅರೆ ನಿದ್ರೆ, ಅರೆ ಕನಸಿನಲ್ಲಿ ಏನೋ ನೋಡುತ್ತಾಳೆ - ಅದು ನಿಜವಾದ ಕನಸಾ, ಅಥವಾ ನೋಡಿರುವ ಸಾವಿರಾರು ಸೀರಿಯಲ್ಲುಗಳ ಕಲಸುಮೇಲೋಗರವಾ ಗೊತ್ತಿಲ್ಲ. ಒಂದು ವ್ಯಕ್ತಿ ಕಾಣುತ್ತಾನೆ - ಅವನ ತಲೆಯ ಸುತ್ತ ಬೆಳಕು (ಅಷ್ಟು ಹೊತ್ತಿಗೆ ಒಂದರೆಕ್ಷಣ ದೊಡ್ಡ ಬಿಸಿಲು ಬಂತಾ ?). ಅವನು ಏನೋ ಹೇಳುತ್ತಿದ್ದಾನೆ. ಅವಳಿಗೆ ಸರಿಯಾಗಿ ಕೇಳಿಸುತ್ತಿಲ್ಲ. ಕೊನೆಯಲ್ಲಿ ಅಭಯ ಹಸ್ತ ತೋರಿಸಿ ಮಾಯವಾಗುತ್ತಾನೆ. ಪೊಲಿಟಿಶಿಯನ್ನಾ? ಎದ್ದ ಶಾಂತಮ್ಮ ಕನಸು ನೆನಪಿಸಿಕೊಳ್ಳಲು ನೋಡುತ್ತಾಳೆ - ಎಲ್ಲಾ ಅರೆಸ್ಪಷ್ಟ. ಏನಿರಬಹುದು - ಯಾ...

Comments
Post a Comment