ನನಗೆ ಧೈರ್ಯವಿಲ್ಲ. ನಾನು ಅಂಜುಬುರುಕಿ
ನನಗೆ ದೆಹಲಿಯಲ್ಲಿ ಪ್ರತಿಭಟಿಸಿತ್ತಿರುವ ಅಜ್ಜಿಯರಷ್ಟು ಅಥವಾ ನಮ್ಮ ಬೆಂಗಳೂರಲ್ಲಿ ಮಾತಾಡಿದ ಹುಡುಗಿಯಷ್ಟು ಧೈರ್ಯವಿದ್ದರೆ ನಾನು ಕೇಳುತ್ತಿದ್ದೆ
ಶಾಂತಿಯಿಂದ ವಿರೋಧಿಸುವುದು ಅಪರಾಧ ಆದರೆ ಕ್ಷುಲ್ಲಕ ಕಾರಣದಿಂದ ಹೊಡೆದು ಸಾಯಿಸುವುದು ಅಪರಾಧವಲ್ಲವೇ. ಇದು ಯಾವ ನ್ಯಾಯ?
ನೆರೆ ದೇಶಕ್ಕೆ ಜಯವಾಗಲಿ ನಮ್ಮ ದೇಶಕ್ಕೆ ಜಯವಾಗಲಿ ಎಂದು ಹೇಳಿ ಬಿಟ್ಟರೆ ಅದು ದೇಶ ದ್ರೋಹ. ಆದರೆ ವಿರೋಧಿಸುವವರನ್ನು ಗುಂಡು ಹೊಡೆದು ಸಾಯಿಸಿರಿ ಎನ್ನುವದು ಮಾತ್ರ ತಪ್ಪಲ್ಲ ? ಇದು ಯಾವ ಧರ್ಮ ?
ದೇಶ ದ್ರೋಹ ಎಂದರೆ ದೇಶದ ವಿರುದ್ಧ ಮಾತನಾಡುವುದಲ್ಲವೇ? ಸರಕಾರದ ವಿರುದ್ಧ ಮಾತನಾಡಿದರೆ ಅದು ದೇಶ ದ್ರೋಹ ಹೇಗಾದೀತು?
ನಮ್ಮದು ಪ್ರಜಾಪ್ರಭುತ್ವವಲ್ಲವೇ? ನಮಗೆ ವಾಕ್ಸ್ವಾತಂತ್ರ್ಯವೂ ಇಲ್ಲದಿದ್ದರೆ ಇದು ಪ್ರಜಾ ಪ್ರಭುತ್ವ ಹೇಗಾದೀತು?
ಆದರೆ ಆ ಹುಡುಗಿಯ ಬೆಂಬಲಕ್ಕೆ ಯಾರೂ ಹೋಗದಿರುವದನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಬೇಕಿಲ್ಲವೇನೋ? ನಾವು ಬಹು ಪರಾಕ್ ಬಹು ಪರಾಕ್ ಹೇಳಲು ಮಾತ್ರ ಯೋಗ್ಯರೇನೋ ?
Comments
Post a Comment