darshana

ವಿಷ್ಯ ಗೊತ್ತಾಯ್ತಾ? ಒಂದನೇ ತಾರೀಖಿನಿಂದಾ ದೇವಸ್ತಾನಾ ಎಲ್ಲ ಓಪನ್ ಮಾಡ್ತಾರಂತೆ.

ನಿಂಗೂ ಸಿಕ್ಕಾ ಪಟ್ಟೆ ಬೇಜಾರಾಗಿತ್ತೇನೋ? ಲೋಕ್ ಡೌನ್ ಅಂತ? ಸಮಯ ಸಮಯಕ್ಕೆ ಪೂಜೆ ಆದ್ರೂ ಮಾಡ್ತಿದ್ರೋ ಇಲ್ವೋ ಏನೋ ? ಯಾರನ್ನೂ ನೋಡದೇ ನಮ್ಮ ಸಾವಿರ ತಲೆ ಹರಟೆ ಕೇಳ್ದೆ ನಿಂಗು ಎಷ್ಟು ಬೇಜಾರಾಗಿತ್ತೋ ಗೊತ್ತಿಲ್ಲ .

 ಆದ್ರೆ ಒಂದ್ ಸಮಸ್ಯೆ ಇದೆ. ನಾವು ನಿಮ್ಮನೆಗೆ - ಅಂದ್ರೆ ದೇವಸ್ಥಾನಕ್ಕೆ ಬರಬಹುದಂತೆ - ವಿಥ್ ಮಾಸ್ಕ್. ನಾವ್ ಮಾಸ್ಕ್ನಲ್ಲಿ ಮುಖ ಮರೆಸಿಕೊಂಡ್ರೆ ನಿನಗೆ ನಾವು ಯಾರು ಅನ್ನೋದು ಹ್ಯಾಗೆ ಗೊತ್ತಾಗೋದು? ಗೊತ್ತಾಗದೆ ಹೋದ್ರೆ ನೀನು ನಮ್ಮ ಅಹವಾಲು ಹೇಗೆ ಪುರೈಸ್ತೀಯ?

ಒಂದ ಕೆಲಸ ಮಾಡಬೌದು. ಒಂದ್ ಸೆಕೆಂಡ್ ಯಾರು ನೋಡದೆ ಇರೋವಾಗ ಮಾಸ್ಕ್ ತೆಗೆದು ಮುಖ ತೋರಿಸ ಬಹುದು. ಫಾರ್ ಎಕ್ಸಾಂಪಲ್, ಮಂಗಳಾರತಿ ಹೊತ್ನಲ್ಲಿ. ಆವಾಗ ಎಲ್ರೂ  ಭಕ್ತಿಯಿಂದ ಕಣ್ಣು ಮುಚ್ಗೊಂಡಿದ್ರೇ ನಾನು ಮಾಸ್ಕ ತೆಗೆದು ನಿಂಗೆ ದರ್ಶನ - ಸಾರೀ ಮುಖ ತೋರಿಸಬಹುದು. ಆದ್ರೆ ಎಲ್ಲರೂ ಆರತಿ ನೋಡ್ತಾ ಇದ್ಬಿಟ್ರೆ?

ಇಲ್ಲಿ ರಿಸ್ಕ್ ಇರೋದು ಎರೆಡೆರಡು - ಒಂದು ಮಾಸ್ಕ ತೆಗೆದು ಆವಾಗ ಬೇರೆಯವರು ಮಾಸ್ಕ ಇಲ್ದೆ ಕೆಮ್ಮಿನೊ ಸೀನಿನೊ ಮಾಡಿದ್ರೆ ಕೊರೊನ ಬಂದು ಅಟ್ಯಾಕ್ ಮಾಡ್ಬಹುದು - ಎರಡು ಯಾರಾದ್ರೂ ನೋಡಿ ಪೊಲೀಸರಿಗೆ ಗೊತ್ತಾಗಿ ಸಿಕ್ಕಾಪಟ್ಟೆ ಫೈನ್ ಹಾಕ್ಬಹುದು. ಬೇಡ ಅಲ್ವ.

ಇನ್ನೊಂದು ಕೆಲಸ ಮಾಡ್ಬಹುದು .  ಮನೆಗೆ ಬಂದ್ ಮೇಲೆ ನಿನಗೆ ವಾಟ್ಸಪ್ಪ್ ಮಾಡಬಹುದು. ನಾನು ಬಂದಿದ್ದೆ. ಕರಿ ಮಾಸ್ಕ ಹಾಕ್ಕೊಂಡಿದ್ದೆ. ಅದೇ ಸುಮಾರು ಬಿಳಿ ಕೂದಲು, ಕನ್ನಡಕ, ಸುಮಾರು ದಪ್ಪಗೆ ಇದ್ದವರು ನಿಂತಿದ್ರಲ್ಲ - ಅದೇ ನಾನು. ಎಲ್ರದ್ದೂ ಬಿಳಿ ಕುದ್ಲು   ಕನ್ನಡಕ, ದಪ್ಪ ಮೈಕಟ್ಟು ಅಂತೀಯಾ. ಅದೇ ಸ್ವಲ್ಪ ಗಾಬರಿ ಗಾಬರಿ ಮುಖ ಮಾಡ್ಕೊಂಡಿದ್ನಲ್ಲ ಅದೇ ನಾನು.

ಇಷ್ಟೆಲ್ಲ ವಾಟ್ಸಪ್ಪ್ ಮೆಸೇಜಲ್ಲಿ  ಹಾಕಬಹುದು . ಅಂಬಾನಿ ನಮಗೆ ಅಂತಾನೆ ಒಂದೂವರೆ ಜಿಬಿ ಡೇಟಾ ಕೊಟ್ಟಿರೋದು. ಬಾಯ್ ದ ವೇ - ನಿಂದು ವಾಟ್ಸಪ್ಪ್ ನಂಬರ್ ಏನು?

Comments

Post a Comment

Popular posts from this blog

ಹೂಗಳು

ಎಮ್ಮೆ

Not for nation