ಕನ್ನಡದಲ್ಲಿ ಬರೆಯೋಣ

No, I am not going to blog about my Java quizard app. 

ಅದರ ಬದಲು ಕನ್ನಡದ ಬಗ್ಗೆ ಮಾತಾಡೋಣ. 

 ಕನ್ನಡದಲ್ಲಿ ಬರೆಯೋಣ

ನಿನ್ನೆ ಕನ್ನಡ ರಾಜ್ಯೋತ್ಸವ. ೧೯೫೬ ನವೆಂಬರ್ ೧ರಂದು ಕನ್ನಡ ಮಾತಾಡುವ ಪ್ರಾಂತಗಳನ್ನೆಲ್ಲ ಒಟ್ಟುಗೂಡಿಸಿ ಕರ್ನಾಟಕ ರಾಜ್ಯವೆಂದು ರಚಿಸಿದರು. ಅದರ ವಾರ್ಷಿಕೋತ್ಸವವೇ ನಮ್ಮ ರಾಜ್ಯೋತ್ಸವ.

ನಿನ್ನೆ ಎಲ್ಲರ ಸೋಶಿಯಲ್ ಮೀಡಿಯಾ ಕನ್ನಡ ಪ್ರೇಮದಿಂದ ತುಂಬಿ ತುಳುಕುತ್ತಿತ್ತು. 

ನನ್ನದು ಒಂದು ಅಳಿಲು ಸೇವೆ ಮಾಡೋಣ - ನಮ್ಮ ಭಾಷೆಗೆ, ನಮ್ಮ ಭಾವಕ್ಕೆ. 

ನಿಮ್ಮಆಂಡ್ರಾಯ್ಡ್ ಫೋನಿನಲ್ಲಿ  ಕನ್ನಡದಲ್ಲಿ ಟೈಪ್ ಮಾಡಲು ತಂತ್ರಾಂಶ ಹಾಕಿಕೊಂಡಿರುತ್ತೀರಾ. ಆದರೆ ಕನ್ನಡದಲ್ಲಿ ನೀವು ಮಾತಾಡಿ ಮಾತಿನಿಂದ ಶಬ್ದಗಳಿಗೆ ಪರಿವರ್ತಿಸಿ ಫೋನೇ  ನಿಮ್ಮ ಮಾತನ್ನು ಟೈಪ್ ಮಾಡುವ ಸಾಧ್ಯತೆ ಇದೆ. (speech to text)

ನಿಮ್ಮ ಫೋನಿನಲ್ಲಿ ಜಿಬೋರ್ಡು (Gboard) ತಂತ್ರಾಂಶ ಇಲ್ಲದಿದ್ದರೆ ಅದನ್ನು ಹಾಕಿಕೊಳ್ಳಿ.. ಆಮೇಲೆ ಸೆಟ್ಟಿಂಗ್ ಗೆ ಹೋಗಿ. ಅದರಲ್ಲಿ ಭಾಷೆ ಕನ್ನಡ ಎಂದು ಅರಸಿಕೊಳ್ಳಿ.. 

ಈಗ ನೀವು ಏನನ್ನಾದರೂ ಟೈಪ್ ಮಾಡಬೇಕಾದಾಗ ಸ್ಪೀಕ್ ಬಟನ್ (ಮೈಕ್ರೋಫೋನ್ ಚಿತ್ರ

)ಅದನ್ನು ಒತ್ತಿರಿ. ಈಗ ನೀವು ಕನ್ನಡದಲ್ಲಿ ಮಾತನಾಡಿ. ನಿಮ್ಮ ಫೋನ್ ಅದನ್ನು ಟೈಪ್ ಮಾಡುತ್ತದೆ. 

ಇದರಿಂದ ನಿಮ್ಮ ಕೆಲಸ ಎಷ್ಟೋ ಸುಲಭವಾಗುವುದು. 




Comments

Popular posts from this blog

ಹೂಗಳು

ಎಮ್ಮೆ

Not for nation