ಹಿಂಬಾಲಿಸದಿರು
ನತಮಸ್ತಕಳಾಗಿ
ಭೂಮಿಯನೇ ನೋಡುತ್ತ
ಹಿಂಬಾಲಿಸದಿರು ಮನುಜೆ
ಈ ದಾರಿ ನಿನದಲ್ಲ
ಈ ರಸ್ತೆ ನಿನಗಲ್ಲ
ಹಿಂಬಾಲಿಸದಿರು ಮನುಜೆ
ಸುತೆಯಾಗಿ ಸತಿಯಾಗಿ
ಆಜ್ಞಾಪಾಲಕಿಯಾಗಿ
ಬುದ್ದಿಯನು ಕಟ್ಟಿಟ್ಪು
ಹಿಂಬಾಲಿಸದಿರು ಮನುಜೆ
ಅವರು ಹೇಳಿದರೆಂದು
ಇವರು ಕಲಿಸಿದರೆಂದು
ಅಪ್ಪ ನೆಟ್ಟ ಆಲದಮರವೆಂದು
ಅರ್ಥವಿಲ್ಲದ ಆಚರಣೆ
ಹಿಂಬಾಲಿಸದಿರು ಮನುಜೆ
ದೈವವ ದೂರದೆ
ಇತರರ ದೂರದೆ
ಕಾರಣವ ಹುಡುಕು ನೀ
ಹಿಂಬಾಲಿಸದಿರು ಮನುಜೆ
Comments
Post a Comment