ಸುರಕ್ಷಿತ
ನಾನು ಸಣ್ಣ ಪುಟ್ಟ ಸಮಸ್ಯೆಗಳು ಬಂದರೂ "ಅಯ್ಯೋ ನಂಗ್ಯಾರೂ ಇಲ್ಲ. ಅಯ್ಯೋ ನನ್ನ ಲೈಫೇ ಹಾಳಾಗಿಹೋಯಿತು. ನಂಗೆ ಯಾಕೆ ಇಷ್ಟು ಪ್ರಾಬ್ಲಮ್ ಬರತ್ತೆ. ನನ್ನ ಯಾರಾದ್ರೂ ಅರ್ಥ ಮಾಡ್ಕೊಳ್ತಾರಾ? " ಅಂತೆಲ್ಲ ಬಡ್ಕೋತೀನಿ.
ಜಗತ್ನಲ್ಲಿ, ಯಾಕೆ, ನಮ್ಮ ಮಹಾ ದೇಶದಲ್ಲಿ ಜನಕ್ಕೆ ಯಾವ್ಯಾವ ರೀತಿ ಸಮಸ್ಯೆ ಬರತ್ತೆ - ನಾನು ಕಲ್ಪನೆ ಮಾಡ್ಕೊಳೋಕ್ಕೂ ಸಾಧ್ಯ ಇಲ್ಲ. - ನಮಗೆಲ್ಲಾರೂ ಸುಳ್ಳು ಸುದ್ದಿ ಹೇಳಿ, ತಲೆ ಕೆಡಿಸ್ತಾರೆ ಎಂದು ಸತ್ಯ ಬಯಲಿಗೆಳಿಯೋರನ್ನ ಸುಂಸುಮ್ನೆ ಜೈಲಿಗ್ಹಾಕ್ತಾರೇ. ಸುಮ್ನೆ ಬಡವರಿಗೆ ಹಿಂದುಳಿದವ್ರಿಗೆ ಸಹಾಯ ಮಾಡ್ಕೊಂಡು ಇದ್ದೋವರನ್ನ ಜಮೀನಿಲ್ದೆ ವಿಚಾರಣೆ ಇಲ್ದೆ ವರ್ಷಗಟ್ಲೆ ಕೂಡಿಹಾಕಿಡ್ತಾರೆ.
ಅದ್ಯಾವ್ದೋ ಓಟಿಟಿ ಶೋನಲ್ಲಿ ಅಪ್ಪನನ್ನು ಪೊಲೀಸ್ ಗುಂಡಿಗೆ ಕಳೆದುಕೊಂಡ ೪ ವರ್ಷದ ಪುಟ್ಟ ಮಗು ಅಮ್ಮನಿಗೆ ಹೇಳ್ದನ್ಗೆ "I wish this place was safer for us.".
ಆದ್ರೆ ಈ ಜಾಗ, ನಂಗೆ, ನಮ್ಮಂತವರಿಗೆ ಸೇಫೆ - ಬಾಯ್ಮುಚ್ಕೊಂಡು ಇರೋತನ್ಕಾ .
ಅಯ್ಯೋ, ನಾನಂತೂ ಮಾತೆ ಆಡಲ್ಲ. ಗಾದೆನೆ ಇದ್ಯಲ್ಲ "ಬಡವಾ ನೀ ಮಡಗದಾಂಗಿರು " ಅಂತ. ಮಡಗದಾಂಗೆ, ಬಾಯಿ ಮುಚ್ಕೊಂಡು, ಕೈ ಕಟ್ಕೊಂಡು ಇದ್ಬಿಡೋಣ.
ನಮ್ಮನೆ ಬಾಗ್ಲಿಗೆ ಬರೋ ತನಕ.
Comments
Post a Comment