ಬೆಳಗಿನ ಜಾವ ಕನಸು. ನಾನು ಇನ್ನೊಂದು ಹುಡುಗಿಯ ಜೊತೆ ಕಂಬೈನ್ಡ್ ಸ್ಟಡಿ ಮಾಡುತ್ತಿದ್ದೇನೆ. ಅದು ಯಾವುದೋ ಎಲೆಕ್ಟ್ರೋ ಮ್ಯಾಗ್ನೆಟಿಕ್ ವಿಷಯ. 

ನೋಟ್ಸ್ ಓಡಿ ಭಯಪಡುತ್ತೇನೆ. ಎಲ್ಲಾ ಗ್ರೀಕ್ ಅಕ್ಷರಗಳು. ಡೆಲ್ಟಾ  ಇತ್ಯಾದಿ . ಇದು ನನಗೆ ಬರುವುದಿಲ್ಲ. ಎಂದು ತಲೆ ಕೆಡಿಸಿಕೊಳ್ಳುತ್ತೇನೆ. 

ವಿಚಿತ್ರ. 57 ವರ್ಷದ ನನಗೆ ಇನ್ನೂ ಸ್ಟಡಿ ವಿಷಯದ, ಪರೀಕ್ಷೆಯ ಕನಸು ಕಾಣುತ್ತದೆ ಎಂದರೆ. ಫ್ರೈಡ್ ಏನೆನ್ನುತ್ತಾನೆ ಇದಕ್ಕೆ. ನನ್ನ ವಯಸ್ಸು ಜೀವನದ ಅರ್ಥದ ಬಗ್ಗೆ, ನಿರರ್ಥಕತೆಯ ಬಗ್ಗೆ ಯೋಚಿಸುವ, ಕನಸುವ ವಯಸ್ಸು.

ಆದರೂ ಒಂದು ತರಹ ಬದುಕ ಸರಿಯಿಲ್ಲ. ಯಾವುದರಲ್ಲೂ ಉತ್ಸಾಹವಿಲ್ಲ. ಎಲ್ಲಿಗೂ ಹೋಗಬೇಕು ಅನಿಸುವುದಿಲ್ಲ. ಹಾಗೆಂದು QUIT ಎನ್ನಲೆ? ನನ್ನ ಜಾಯಮಾನದಂತೆ. ಆದರೆ ನನ್ನ ಕೈಯಲ್ಲಿ ಇಲ್ಲವಲ್ಲ.

ಸರಿ, ಮನೆಯಿಂದ ಬೇರೆ ಊರಿಗೆ ಹೋಗಲು ಮನಸ್ಸಿಲ್ಲ. ಆಯ್ತು. ಆದರೆ ಮನೆ ಯಾವುದು? ಎಲ್ಲಿದೆ? ಸುಮ್ಮನೆ ಕ್ಲೀಷೆ ಆದ ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನಲಾ? ಅಲ್ಲಿ ಎಂದರೆ ಎಲ್ಲಿ?

ಎಲ್ಲೋ ಓದಿದಂತೆ ಒಂದು ರೀತಿಯ dual unbelongingness ಅಥವಾ omni unbelongingness ಕಾಡುತ್ತದೆ. 

ಸರಿ. ಹೋಗಬೇಕು ಮತ್ತೆ ಅದೇ ಕುಕ್ ಕ್ಲೀನ್ ರಿಪೀಟ್ ಯಾಂತ್ರಿಕತೆಗೆ.

Comments

Popular posts from this blog

ಹೂಗಳು

ಎಮ್ಮೆ

Not for nation