ಕನ್ನಡದ ಕಷ್ಟ

ತಲೆ ಬರಹ ನೋಡಿ, ಪ್ರಕಟಿಸಿರೋ ದಿನಾಂಕ ನೋಡಿ, ನಾನು ಕನ್ನಡ, ಕನ್ನಡ ಜನ ಭಾರೀ ದೊಡ್ಡ ಖತರಾದಲ್ಲಿ ಇದ್ದಾರೆ ಅಂತೀನಿ ಅಂದ್ಕೋಬೇಡಿ. ನಿಜವಾದ ತಲೆ ಬರಹ - ನನ್ನ ಕಂಪ್ಯೂಟರ್ ಕನ್ನಡದ ಕಷ್ಟ . 

ಸುಮಾರು ಕಷ್ಟ ಪಟ್ಟು ಬಿಟ್ಟೆ ಕನ್ನಡ ಮತ್ತು ಹಿಂದಿ ಲಿಪಿಗಳನ್ನು ನನ್ನ ಲಿನಕ್ಸ ಕಂಪ್ಯುಟರ್ನಲ್ಲೆ ಹಾಕೋಕೆ. 

ಅಂಗ್ಡೀಗ್ ಹೋಗಿ ಐನೂರು ರೂಪಾಯಿ ತೆತ್ತು ಕೆಲ್ಸಾ ಮಾಡಿಸ್ಕೋಬೇಕಿತ್ತು, ಅಂತೀರಾ? ಅ) ನಮ್ಮನೇಲಿ ದುಡ್ಡಿನ ಗಿಡ ಇಲ್ಲ ಬ)ಗೂಗಲ್ ಇನ್ಯಾತಕ್ಕಿದೆ ಮತ್ತೆ? 

 ಗೂಗಲ್ ಮಾಡಿದೆ. ಸಾವಿರ ಸಲಹೆ ಸಿಕ್ಕಿತು. ಅದರಲ್ಲಿ ಒಂದ್ ಹತ್ತು ಸರಿಯಾಗಿದ್ದದ್ದು. ಅದೂ ಕೆಲಸಾ ಮಾಡ್ತಾ ಇಲ್ಲ. 

ಒಂದ್ ಹತ್ತು ಪಾಕೇಜ ತೆಗೆದು, ಮತ್ತೆ ಹಾಕಿ ಲಾಸ್ಟಲ್ಲಿ ವರ್ಕ ಆಯಿತು. ಅದೇನೋ ibus-m17n ಪಾಕೇಜು  (ಭಾರತೀಯ ಭಾಷೆಗಳಿಗೆ) ಅಂತಪ್ಪ. ಅದನ್ನೂ ಹಾಕ್ದೆ.  ಈಗ ಸ್ಟೇಟಸ್ ಬಾರ್ ನಲ್ಲಿ ಎರಡೆರಡು ಭಾಷೆಯ ಬಟನ್ ಇದೆ. 

ಮೋರ್ ದ ಮೆರಿಯರ್ ಅಲ್ವಾ?

ಆದ್ರೂ ಈ ನಮ್ಮ ಭಾಷೆ, ಸ್ವಲ್ಪ ಬರಿಯೋಕೆ ಕಷ್ಟ. ಇಂಗ್ಲೀಷ್ ಬರೀವಾಗ ಜಿಂಕೆ ಸ್ಪೀಡಲ್ಲಿ ಬರೆಯೋಳು ಇದ್ರಲ್ಲಿ ಆಮೆ ಸ್ಪೀಡು. ಅದೂ ಯಾರೋ ಕೈ ಹಿಡಿದು ಎಳೀತಾ ಇದ್ದಂಗೆ ಬೇರೆ ಅನಿಸತ್ತೆ. 

ಹೋಗ್ಲಿ ಬಿಡಿ.   ರಂಗಣ್ಣ ಹೇಳೋ ಹಾಗೆ ಮುಂದಕ್ ಹೋಗೋಣ. 

ಹೇಗಿದೆ ನಿಮ್ಮನೆ ಟೀವಿ? ಸರಿಯಾಗೆ ಕೆಲ್ಸಾ ಮಾಡ್ತಾ ಇದೆಯಾ? ದಿನಾ ಮೂರೂ ಹೊತ್ತೂ ನಂಜು ಕಾರ್ತಾ ಇದೆ ತಾನೆ? 

ಜನ ಎಲ್ಲಾ ಟೀವಿ ನೋಡೋದು ಇನ್ನೇನಕ್ಕೆ  ಅಂದ್ಕೊಂಡಿದೀರಾ? ಏನು ಊರು ಕೇರಿ ಸಮಾಚಾರ ತಿಳ್ಕೊಳಕ್ಕಾ?  ನೀವೂ ಚೆನ್ನಾಗೆ ಜೋಕ್ ಮಾಡ್ತೀರಾ!

 ಟೀವಿ ಅದ್ರ ಉದ್ದೇಶವೇನೋ  ಚೆನ್ನಾಗಿ ಈಡೇರ್ತಾ ಇದೆ. ಅಣ್ಣ ತಮ್ಮಂದಿರ ಮಧ್ಯ, ಗೆಳಯ ಗೆಳೆಯರ ಮಧ್ಯ, ಗಂಡ ಹೆಂಡತಿ ಮಧ್ಯ, ಮನೆ ಮಂದಿ ಮಧ್ಯ, ಎಲ್ಲರ ಮಧ್ಯದಲ್ಲೂ ಜಗಳ ತಂದಿಟ್ಟಿದೆ. ಇಂಗ್ಲೀಶರಿಗೆ ಮಾಡಲು ಆಗ್ದೇ ಇರೋ ಕೆಲ್ಸ (ನಮ್ಮನ್ನು ಒಡೆಯೋದು) ಟೀವಿ, ಸಾಮಾಜಿಕ ಮಾಧ್ಯಮ ಮಾಡ್ತಾ ಇವೆ.- ಡಿವೈಡ್ ಎಂಡ್ ರೂಲ್. ವಿತ್ ಡೆವೈನ್ ಇಂಟರ್ ವೆನ್ಷನ್!

ಇನ್ನೊಂದ್ ಸಾಧ್ಯತೆ ಅಂದ್ರೆ - ಸಮತೋಲನ. ಜನರಲ್ಲಿ ಭಕ್ತಿ, ಅಭಿಮಾನ ಹೆಚ್ಚಾದ ಹಾಗೆ ಅದನ್ನು ಬಾಲೆನ್ಸ್ ಮಾಡೋದಕ್ಕೆ ಭಕ್ತಿ  ದ್ವೇಷ ಹೆಚ್ಚಾಗತ್ತೇನೋ? ಯಾರ್ದಾದ್ರೂ  ನೆಂಟರ ಮನೆಗೆ ಹೋಗಿ ಕೈ ಕಟ್ಕೊಂಡು ಸ್ವಲ್ಪ ಹೊತ್ತು ಕೂತ್ಕೊಂಡ್ರೆ, , ಮನೇಗ್ ಬಂದು ಎರಡೂ ಕೈಯಲ್ಲೂ ಮೊಬೈಲ್ ತಿಕ್ಕಲ್ವಾ, ಹಾಗೇ. 

ಸಮಯ ಸಿಕ್ದಾಗ್ಲೆಲ್ಲ ಟಿವಿ ವಿರುದ್ಡ, ಧರ್ಮದ ವಿರುದ್ಡ ಮಾತಾಡ್ತೀನಿ ಅಂದ್ಕೋಬೇಡಿ. ಮನೇಲಿ ಇಡಿ ದಿನಾ ಒಬ್ನೇ ಕೂತಿರ್ತೀನಲ್ಲಾ. ಜಗಳಾ ಮಾಡೊ ಅವಕಾಶ ಇರೋದಿಲ್ವಲ್ಲ  - ಸಮತೋಲನ !


Comments

  1. ತುಂಬಾ ಚೆನ್ನಾಗಿದೆ

    ReplyDelete

Post a Comment

Popular posts from this blog

ಹೂಗಳು

ಎಮ್ಮೆ

Not for nation