ನಿನ್ನ ತಪ್ಪು

 ನಿನ್ನ ತಪ್ಪು, ಇನ್ನೂ ಚೆನ್ನಾಗಿ ಮೈ ಮುಚ್ಚಿಕೋಬೇಕಿತ್ತು.
ಅವರು ಸೀಟಿ ಹೊಡೆಯುವಂತೆ ಮಾಡಿದೆಯಲ್ಲ, ನಿನ್ನ ತಪ್ಪು

ನಿನ್ನ ತಪ್ಪು, ಕತ್ತಲೆ ಆದ ಮೇಲೆ ಹೊರ ಹೋದ್ಯಲ್ಲಾ
ಅವರು ಅಸಹ್ಯ ವರ್ತಿಸುವಂತೆ ಮಾಡಿದೆಯಲ್ಲಾ, ನಿನ್ನ ತಪ್ಪು.

ನಿನ್ನ ತಪ್ಪು ,ಕಾಗದ ಪತ್ರ ಸರೀ ಇದೆ ಎಂದು ಮನೆ ಕೊಂಡ್ಯಲ್ಲ
 ಅನಧಿಕೃತ - ಕೋರ್ಟು ಕಛೇರಿ ಸುತ್ತಬೇಕು.
ಎಲ್ಲಿ ಬುಲ್ ಡೋಜರ್ ಬರತ್ತೋ  ನಡುಗುತ್ತಾ ಇರಬೇಕು, ನಿನ್ನ ತಪ್ಪು

ನಿನ್ನ ತಪ್ಪು, ಸೇತುವೇ ರಿಪೇರಿ ಮಾಡಿದ್ದಾರೆ  ನೋಡಲು ಬಂದ್ಯಲ್ಲಾ
ಸುಮ್ಸುಮ್ನೆ ಸತ್ ಹೋದೆ. ನಿನ್ನ ತಪ್ಪು. 

Comments

Popular Posts