ಅ-ಸಂಸ್ಕೃತ
ಈ ಲೇಖನವನ್ನು ಕನ್ನಡದಲ್ಲೇ ಬರೆಯಬೇಕಾಗಿದೆ. ನನ್ನದೊಂದು ಕನಸು. ನನಗೆ ಅಲ್ಪ ಸ್ವಲ್ಪ ಕಂಪ್ಯೂಟರ್ ಗೊತ್ತು. ಅತಿ ಸ್ವಲ್ಪ ಸಂಸ್ಕೃತ ಭಾಷೆಯೂ ಗೊತ್ತು. ಅವೆರಡರ ಅರಿವನ್ನು ಒಂದುಗೂಡಿಸಿ ಒಂದು ಸಂಸ್ಕೃತ ಕಲಿಕೆಯ ಆಪ್ ಬರೆಯಬೇಕು ಎಂದು. ಸಂಸ್ಕೃತ ಜ್ಞಾನ ವಿಸ್ತಾರ ಮಾಡಿಕೊಳ್ಳಲು 'ಸಂಸ್ಕೃತ ಭಾರತಿ' ಯವರ ಒಂದು ಪರೀಕ್ಷೆ ಬರೆದು ಉತ್ತೀರ್ಣಳೂ ಆದೆ. ಎರಡನೇ ಪರೀಕ್ಷೆ - ಪರಿಚಯ ಬರೆಯುವ ಹೊತ್ತಿಗೆ ನನ್ನ ಆರಂಭ ಶೂರತನವೂ ಮುಗಿದಿತ್ತು - ನನ್ನ ಗೆಳತಿಯರೂ ಕಳಚಿಕೊಂಡಿದ್ದರು. ಆ ಕಲಿಕೆ ಅಲ್ಲಿಗೇ ನಿಂತಿತು. ಎರಡನೇ ಮಾರ್ಗ ಪ್ರಯತ್ನಿಸೋಣ ಎಂದು ಬ್ಲಾಗ್ ಶುರು ಮಾಡಿದೆ - ಅದರಲ್ಲೂ ಗೊಂದಲ ಆರಂಭವಾಯಿತು. ವ್ಯಾಕರಣ ಬರೆಯಲೇ? ಶಬ್ದಾರ್ಥವೇ? ಪೂರ್ಣವಾಕ್ಯಗಳೇ? ಕಥೆಗಳೇ? ಏನು ಬರೆಯಲಿ? ಸುಲಭವಾಗಿ ಲಭಿಸುವ NCERT ಸಂಸ್ಕೃತ ಪಠ್ಯ ಪುಸ್ತಕಗಳನ್ನು ಡೌನ್ಲೋಡ್ ಮಾಡಿಟ್ಟುಕೊಂಡೆ. ಡೌನ್ಲೋಡ್ ಆದದ್ದೆಲ್ಲ ಡೈರೆಕ್ಟ್ ಮೆದುಳಿಗೆ ಡೌನ್ಲೋಡ್ ಆಗಬೇಕಿತ್ತು. ಆಗುವದಿಲ್ಲವಲ್ಲ. ಇನ್ನೂ ತನಕ ಆ ತಂತ್ರಜ್ಞಾನ ಬಂದಿಲ್ವಲ್ಲ. (ನನ್ನ ತಿಳುವಳಿಕೆಯ ಪ್ರಕಾರ). ಬ್ಲಾಗೂ ಹಿಂದೆ ಬಿದ್ದಿತು. ಕೆಲವು ಶ್ಲೋಕಗಳನ್ನು ಅನುವಾದಿಸೋಣ ಎಂದುಕೊಂಡೆ. ಕೆಲವನ್ನು ಅನುವಾದ ಮಾಡಲೂ ಆರಂಭಿಸಿದೆ. ಒಂದೆರಡು ಸರಳ ಶ್ಲೋಕಗಳ ನಂತರ ಉಪನಿಷತ್ತುಗಳಿಗೆ ಹೋದೆ. ಅದು ಕಬ್ಬಿಣದ ಕಡಲೆಯಾಯಿತು. ಉಪನಿಶತ್ತುಗಳ ಅನುವಾದ ಮಾಡಲು ನನಗೆ ತತ್ವಜ್ಞಾದ ಗಂಧಗಾಳಿ ಗೊತ್ತಿದ್ದರೆ ತಾನೇ? ಅಂದ