ಕಲ್ಟ್ ಎನ್ನುವ ಶಬ್ದ ಇಂಗ್ಲಿಷ್ನಲ್ಲಿ ಬಹಳ ಪ್ರಚಾರದಲ್ಲಿದೆ. ಈ ಕಲ್ಟ್ ಅನುಯಾಯಿಗಳನ್ನು ಭಕ್ತರು ಎಂದು ಹೇಳಲಾಗದು. ಯಾವುದೊ ಒಂದು ನಿಗೂಢ ಗುಂಪಿನ ಅಂಧ ಭಕ್ತರು ಎನ್ನಬಹುದೇನೋ. ಒಂದು ಭೀಕರ ಉದಾಹರಣೆ ಕೊಡುತ್ತೇನೆ ೧೯೭೮ರಲ್ಲಿ ದಕ್ಷಿಣ ಅಮೆರಿಕಾದ ಗಯಾನಾ ದೇಶದ ಜೋನ್ಸ್ಟೌನ್ ಎಂಬ ಊರಿನಲ್ಲಿ ಜಿಮ್ ಜೋನ್ಸ್ ಎಂಬ 'ಗುರು'ವಿನ ಒಂದು ಆಶ್ರಮವಿತ್ತು. ೩೮೦೦ ಎಕರೆ ಕ್ಷೇತ್ರದಲ್ಲಿರುವ ಈ ಆಶ್ರಮದಲ್ಲಿ ಅವನ ಅನುಯಾಯಿಗಳು - ಹೆಂಗಸರು, ಗಂಡಸರು, ಮಕ್ಕಳು ಎಲ್ಲ ಇದ್ದರು. ೧೮-ನವೆಂಬರ್ ೧೯೭೮ರಂದು ಜಿಮ್ ಜೋನ್ಸ್ ಅವರಿಗೆಲ್ಲ ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡಿ ಹೇಳುತ್ತಾನೆ - 'ನೀವೆಲ್ಲ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಈ ಜನರು ನಿಮ್ಮನ್ನು ಬಂಧಿಸಿ ಡಮ್ಮಿ ಗಳನ್ನಾಗಿಸುತ್ತಾರೆ, ಫ್ಯಾಸಿಸ್ಟ್ ಗಳಾಗಿಸುತ್ತಾರೆ. ' ಎಂದೆಲ್ಲ ಪುಸಲಾಯಿಸಿ ೯೧೮ ಜನರ ಸಾಮೂಹಿಕ ಹತ್ಯೆ/ಆತ್ಮಹತ್ಯೆ ಮಾಡುತ್ತಾನೆ. ಪ್ರಶ್ನೆ ಏನೆಂದರೆ ಅವರೆಲ್ಲ ವಿಷ ಕುಡಿಯಲು, ಅಥವಾ ವಿಷದ ಇಂಜೆಕ್ಷನ್ ತೆಗೆದುಕೊಳ್ಳಲು ಹೇಗೆ ಒಪ್ಪಿದರು? ತಮ್ಮ ಮಕ್ಕಳಿಗೆ ಹೇಗೆ ವಿಷ ಕುಡಿಸಿದರು. ಇದು ಅಂಧ ಭಕ್ತಿಯ ಪರಾಕಾಷ್ಠೆ - "ತಮ್ಮ ಗುರು ದೇವರು, ಅವನು ಹೇಳಿದ್ದನ್ನು ನಂಬಿ ಅದರಂತೆ ನಡೆದುಕೊಳ್ಳಲೇ ಬೇಕು. ಅವನನ್ನು ನಂಬದವರು ದುಷ್ಟರು, ಇತ್ಯಾದಿ, ಇತ್ಯಾದಿ.". ಇಂತಹ ಬೋಧನೆಗಳನ್ನು ಕಲ್ಟ್ ಅನುಯಾಯಿಗಳಿಗೆ ನೇರವಾಗಿ, ಇಂಡೈರೆಕ್ಟ್ ಆಗಿ, ಪದ