ಪಾಕಿಸ್ತಾನದ ಚುನಾವಣೆಯ ನಾಟಕ
ಮಹಿಳಾ ಕುಸ್ತಿ ಪಟುಗಳು ಕೂಗಿ ಅತ್ತು ಕರೆದು ಬೊಬ್ಬೆ ಹೊಡೆದುಕೊಳ್ಳಲಿ ಬಿಡಿ. ಮಣಿಪುರ ಹೊತ್ತಿ ಉರಿಯಲಿ ಬಿಡಿ. ಹಲ್ಡ್ವಾನಿಗೆ ಸೇನೆ ಕಳಿಸಿದ್ದಾರೆ ಬಿಡಿ. ನಮಗೆ ಅದೆಲ್ಲ ಬೇಡ, ಪಾಕಿಸ್ತಾನದಲ್ಲಿ ಏನು ನಡೀತಾ ಇದೆ ನೋಡೋಣ.
ಪಾಕಿಸ್ತಾನದಲ್ಲಿ ಚುನಾವಣೆ ಮುಗಿದು ಫಲಿತಾಂಶವು ಬಂದಿದೆ. ಪೂರ್ವ ಪ್ರಧಾನಿ ನವಾಜ್ ಶರೀಫರ ಪಕ್ಷಕ್ಕೆ ೭೫ ಸೀಟುಗಳು, ಪಿ ಪಿ ಪಿ ಪಕ್ಷಕ್ಕೆ ೫೪ ಸೀಟುಗಳು ಬಂದರೆ ಸ್ವತಂತ್ರ ಅಭ್ಯರ್ಥಿಗಳು ೧೦೧ ಜನ ಆರಿಸಿ ಬಂದಿದ್ದಾರೆ.
೧೦೧ ಸ್ವತಂತ್ರರು ಹೇಗೆ ಅಂತೀರಾ - ಇನ್ನೊಬ್ಬ ಪೂರ್ವ ಪ್ರಧಾನಿ ಇಮ್ರಾನ್ ಖಾನ್ ಕತೆ ಕೇಳಿ. ಇಮ್ರಾನ್ ಖಾನ್ ನಮ್ಮ ಭಾರತೀಯರಿಗೆಲ್ಲ ಚೆನ್ನಾಗಿ ಗೊತ್ತು. ಅವರು ಪ್ರಸಿದ್ಧ ಕ್ರಿಕೆಟ್ ಆಟಗಾರ. ೧೯೯೬ರಲ್ಲಿ ಪಾಕಿಸ್ತಾನ ತೆಹರಿಕೆ ಇನ್ಸಾಫ್ ಅಂತ ಪಕ್ಷ ಸ್ಥಾಪಿಸಿ, ೨೦೧೮ರಲ್ಲಿ ಪ್ರಧಾನಿಯೂ ಆದರು.
ಆದರೆ ಪಾಕಿಸ್ತಾನ ನಮ್ಮ ದೇಶದಂತಲ್ಲ. ಅಲ್ಲಿ ಮಿಲಿಟರಿಯ ಬೆಂಬಲ ಕಳೆದುಕೊಂಡರೆ ಯಾವ ಸರಕಾರಕ್ಕೂ ಉಳಿಗಾಲ ಇಲ್ಲ. ಇಮ್ರಾನ್ ಖಾನ್ ಅವರಿಗೂ ಅದೇ ಆಯಿತು. ಮೊದಲೆಲ್ಲ ಚೆನ್ನಾಗಿದ್ದ ಅವರ ಮಿಲಿಟರಿಯ ಸಂಬಂಧ ಹಳಿಸಿತು. ಪರಿಣಾಮ, ೨೦೨೨ರಲ್ಲಿ ಅವಿಶ್ವಾಸ ಮತ ಮಂಡಿಸಿ ಅದರಲ್ಲಿ ಇಮ್ರಾನ್ ಖಾನ್ ಸೋತು ಹೋದರು - ಅವರ ಸರಕಾರ ಉರುಳಿತು.
ಅಲ್ಲಿಗೆ ನಿಲ್ಲಲಿಲ್ಲ - ಅವರ ದುರ್ದೆಸೆ. ಭಯೋತ್ಪಾದನೆಯ ಗಂಭೀರ ಆರೋಪ ಹೊರಿಸಿ ಅವರನ್ನು ಬಂಧಿಸಿದರು. ಪಾಕಿಸ್ತಾನಿ ಎಲೆಕ್ಷನ್ ಕಮಿಷನ್ ಅವರ ಪಕ್ಷವನ್ನು ರದ್ದು ಮಾಡಿಬಿಟ್ಟಿತು.
ಇಲ್ಲಿ ಇನ್ನೊಂದು ಇಂಟೆರೆಸ್ಟಿಂಗ್ ಬೆಳವಣಿಗೆ ಆಯಿತು. ಮೊದಲು ಭ್ರಷ್ಟಾಚಾರದ ಅಪಾದನೆಯಲ್ಲಿ ಬಂದಿಸಿದ್ದ ನವಾಜ್ ಷರೀಫ್ ಅವರ ಬಿಡುಗಡೆಯಾಗಿ ಅವರ ಮೇಲಿನ ಅಪಾದನೆಗಳೆಲ್ಲ ಮಾಯವಾದವು. ಮಿಲಿಟರಿ ಅವರನ್ನುಚುನಾವಣೆಗೆ ನಿಲ್ಲಿಸಿ ಅವರನ್ನು ಪ್ರಧಾನಿ ಮಾಡುವ ಎಲ್ಲ ತಯಾರಿ ನಡೆಸಿತು.
ಇತ್ತ ಇಮ್ರಾನ್ ಬೆಂಬಲಿಗರು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಂತರೆ ಅವರ ಮೇಲೆ ಹಲ್ಲೆಗಳು ನಡೆದವು.
ಈಗ ಇಲ್ಲಿಗೆ ಬಂದು ನಿಂತಿದೆ ಕತೆ - ಇನ್ನು ಯಾರು ಪ್ರಧಾನಿ ಆಗುತ್ತಾರೆ? ಅವರ ಮೇಲೆ ಮಿಲಿಟರಿ ಕಟಾಕ್ಷ ಎಷ್ಟು ದಿನ ಇರತ್ತದೆ ಕಾಡು ನೋಡಬೇಕು.
ನಾವು ಸುಮ್ಮನೆ ನಮ್ಮ ದೇಶದ ರಾಜಕೀಯ ಸರಿ ಇಲ್ಲ ಎಂದು ಕೂಗುತ್ತೇವೆ.
Comments
Post a Comment