ವಿಕಾಸ

ನಿಮಗೆ ವಿಕಾಸ ಆಗಿಲ್ಲ ಅಂತಾ ಯಾರ್ ಹೇಳಿದ್ರು?  ವಿಕಾಸ ಬೇಕಾದಷ್ಟು ಆಗಿದ್ಯಲ್ಲ. 

ದ್ವೇಷ ವಿಕಾಸ ಆಗಿದೆ. ಈಗ ಎಪ್ಪತ್ತು ವರ್ಷದಲ್ಲಿ ಯಾವಾಗಾದರೂ ಇಷ್ಟು ಓಪನ್ ಆಗಿ ಬೇರೆ ಧರ್ಮ, ಬೇರೆ ಜಾತಿಯವರನ್ನು ವಿನಾ ಕಾರಣ ಬೈದು, ಬೈದು ನಮ್ಮ ತಲೆ ಹಾಳುಮಾಡಿಕೊಳ್ಳುತ್ತದ್ದೆವಾ? 

ಬೇರೆಯವರನ್ನು - ಬೇರೆ ಜಾತಿ, ಬೇರೆ ಧರ್ಮ, ಬೇರೆ ಭಾಷೆಯವರ ಕಂಡರೆ ಅಸಹನೆಯ ವಿಕಾಸ ಅಂತೂ ಸಾಕಷ್ಟು ಆಗಿದೆ.

ಇನ್ನು ಸತ್ಯದ ತಲೆ ಮೇಲೆ ಹೊಡೆದ್ ಹಾಗೆ ಸುಳ್ಳು ಹೇಳೋ ಕಲೆ ವಿಕಾಸ ಆಗಿದೆ. ಟಿ.ವಿ. ಚಾನೆಲ್ ಗಳಲ್ಲಿ ಕುಳಿತ್ಕೊಳ್ಳೋರ್ ನೋಡಿ. ಅವರಿಗಂತೂ ಸತ್ಯ, ಸುಳ್ಳಿನ ಅಂತರಾನೇ ಮರತು ಹೋಗಿದೆ. ಅವರ ಮಾತಿನ ಪರಿಣಾಮ ಏನಾಗಬಹುದು ಅಂತ ತಲೆ ಕೆಡಿಸಿಕೊಳ್ಳೋದು ಅಂತೂ ಇಲ್ಲವೇ ಇಲ್ಲ.

ಇನ್ನು ಆರ್ಥಿಕ ಪರಿಸ್ಥಿತಿನೂ ಸುಧಾರಿಸಿದೆಯಲ್ಲ - ಪೆಟ್ರೋಲ್ ಬೆಲೆಯಲ್ಲಿ ವಿಕಾಸ ಆಗಿದೆ. ಕಾಳು, ಕಡಿ, ಹಣ್ಣು, ತರಕಾರಿ ಇವೆಲ್ಲವುಗಳ ಬೆಲೆಯಂತೂ ವಿಕಾಸ ಆಗಿ, ಆಗಿ, ಆಕಾಶನೇ ತಲಪತಾ ಇದೆ.

ಇನ್ನೂ ಒಂದು ವಿಕಾಸ ಆಗಿದೆ - ನಮ್ಮ ನಿಮ್ಮ ಮನೆಗಳಲ್ಲಿ ರಾಜಕಾರಣದ ಹೆಸರಲ್ಲಿ ನಡೆಯುವ ಜಗಳಗಳ ವಿಕಾಸ ಆಗಿದೆ.

ಸಬಕಾ ವಿಕಾಸ - ಸಬಕಾ ವಿಕಾಸ!

Comments

Popular posts from this blog

ಹೂಗಳು

ಎಮ್ಮೆ

ಸೇಲ್