ನಾವೆಲ್ಲ ಕೃತಕ ಭಾವನೆಗಳ ದಾಸರಾಗಿಬಿಟ್ಟಿದ್ದೇವೆ. 

ನಮ್ಮ ಇಷ್ಟ, ಅನಿಷ್ಟಗಳು, ರಾಗ-ದ್ವೇಷಗಳು, ಗೌರವ-ನಿಕೃಷ್ಟೆಗಳು ಎಲ್ಲವನ್ನು ಅಲ್ಗಾರಿತಮ್-ಗಳು ನಿರ್ಧರಿಸುತ್ತಿವೆ. 

ನಾವು ಹಗಲೂ-ಇರಳೂ ಮುಖದೆದುರಿಗೆ ಹಿಡಿದು ಕೂತಿರುವ ಪ್ಲಾಸ್ಟಕ್ ಡಬ್ಬಿಯು ನಮ್ಮೆಲ್ಲರನ್ನು ರಕ್ತ-ಮಾಂಸಗಳ ಬದಲು ದ್ವೇಷ-ಕೋಪಗಳ ಚೀಲವನ್ನಾಗಿಸಿಬಿಟ್ಟಿದೆ. ಅದನ್ನು ತಿಳಿದೂ ನಾವು ನಿಸ್ಸಹಾಯಕರಂತೆ ಮತ್ತೆ ಮತ್ತೆ ಅದೇ ಮೇವನ್ನು ಮೈ ತುಂಬ ತುಂಬಿಕೊಳ್ಳುತ್ತಿದ್ದೇವೆ 

ಒಂದು ಉದಾಹರಣೆ - ಯಥಾ ಪ್ರಕಾರ ಯೂಟ್ಯೂಬು ನನಗೆ ಒಂದು ವಿಡಿಯೋ ತೋರಿಸಿತು - ದೇವನೂರು ಮಹಾದೇವರ ಬಗ್ಗೆ. ನನಗೆ ಈಗ ಎಲ್ಲಿಲ್ಲದ ಉತ್ಸಾಹ - ಅವರ ಪುಸ್ತಕ- ವಿವಾದಾತ್ಮಕ ಪುಸ್ತಕ ಎಲ್ಲಿದೆ - ಅದರ ವಿಮರ್ಶೆ ಎಲ್ಲಿದೆ ಎಂದು ಹುಡುಕತೊಡಗಿದೆ. ಸಾಧಾರಣವಾಗಿ ಏನನ್ನೂ ಓದದ ನಾನು ಯಾಕೆ ಓದಲು ಆಸಕ್ತಿ ತೋರಿಸಿದೆ - ನನಗೆ ಬೇಡದವರ ಬಗ್ಗೆ ನನ್ನ ಪೂರ್ವಾಗ್ರಹಗಳನ್ನು ಸಮರ್ಥಿಸುವ ಲೇಖನ ಓದಿ ಬಿಡೋಣ ಎಂದು.

ತರ್ಕಬದ್ಧವಾಗಿ ನೋಡಿದರೆ ಆ ಧರ್ಮ ನಮ್ಮದೇ - ಆ ಜನರೆಲ್ಲ ನಮ್ಮವರೇ. ಎಲ್ಲ ತತ್ವಗಳಂತೆ ಅವರ ತತ್ವದಲ್ಲು ಒಳ್ಳೆಯ ಅಂಶಗಳೂ ಇವೆ, ಕೆಟ್ಟ ಅಂಶಗಳೂ ಇವೆ. ಹಾಗಿದ್ದರೂ ನಾನು ಬೇರೆ ಧರ್ಮದವರು ನನ್ನು ಸೋದರ ಮಾವನ ಮಕ್ಕಳು ಎನ್ನು ವ ರೀತಿ ಮಮತೆ ಯಾಕೆ ತೋರಿಸುತ್ತಿದ್ದೇನೆ? ಅಲಿಪ್ತವಾಗಿ ಯಾಕೆ ಇರುವದಿಲ್ಲ?

ನನ್ನ ದ್ವೇಷ ಎಷ್ಟು ನನ್ನದ್ದು, ಎಷ್ಟು ಯುಟ್ಯೂಬು, ಟ್ವಿಟರಿನದ್ದು? 

Comments

Popular Posts