ಸಮತೋಲನ

 ಇದೊಂದ್ ಶಬ್ದದ ಸಲುವಾಗಿ ನಾನು ಈ ಪೋಸ್ಟನ್ನ ಕನ್ನಡದಲ್ಲಿ ಬರೀಬೇಕಾಗಿ ಬಂತು.

ನಂಗೊಂದ್ ಮೆಸೇಜ್ ಬಂತು - ನಿಮ್ಮ ಸಮತೋಲನ ಮತ್ತು ಇತರ ವಿವರಗಳನ್ನ ತಿಳಿಯಲು http:yavudoondutinryurl  ನ್ನು ಕ್ಲಿಕ್ ಮಾಡಿರಿ

ಸಮತೋಲನವಾ? ಯಾರಿಗೆ? ಸರೀ ಎಣ್ಣೆ ಹಾಕಿ ಟೈಟ್ ಆದವರಿಗಾ?

ಹೇಗೆ ಅವರು ಸಮತೋಲನ ನೋಡ್ತಾರೆ? ಆ ವೆಬ್ ಸೈಟ ಓಪನ್ ಮಾಡಿ, ಆಮೇಲೆ ಫೋನ್ ಮೇಲೆ ಒಂದ್ ಕಾಲಲ್ಲಿ ನಿಲ್ಬೇಕಾ?

ಹಾಗೆಲ್ಲ ಯಾರೂನಿಲ್ಲೋದಿಲ್ಲ . ಫೋನ ಹಾಳಾದರೆ ನಮ್ಮಪ್ಪ ತಂದು ಕೊಡ್ತಾನಾ ?  ಜನಾ ಅಷ್ಟೆಲ್ಲಾ ದಡ್ದರಲ್ಲಾ. ಫೋನ್ ವಿಷಯದಲ್ಲಂತೂ ಸಿಕ್ಕಾಪಟ್ಟೆ ಸ್ಮಾರ್ಟ್ ಆಗೇ ಇರ್ತಾರೆ.

ಅದಲ್ಲ ಅಂದ್ರೆ ಇನ್ನ ಹೇಗೆ ಸಮತೋಲನಾ ನೋಡ್ತಾರೆ? ತಲೆ ಮೇಲೆ ಫೋನ್ ಇಟಗೊಂಡು ಆ ಸೈಟ ಓಪನ್ ಮಾಡಿದ್ರೆ ಅದು ಹೇಳತ್ತಾ - "ನೀವ್  ಹಾಕಿದ ಎಣ್ಣೆ ಎಲ್ಲೋ ಡೂಪ್ಲಿಕೇಟ್ ಇರ್ಬೇಕು. ನೀವ್  ಇನ್ನು ಪೂರ್ತಿ ಓಲಾಡ್ತಾ ಇಲ್ಲ. "

ಆದ್ರೆ ಸಮತೋಲನ ನೋಡೋ ಅವಶ್ಯಕತೆ ಇರೋವ್ರಿಗೆ ಸಮತೋಲನದ್ ಮೇಲೆ ಡೌಟ್  ಇರತ್ತೆ. ಅವ್ರು ಯಾವ ಧೈರ್ಯದ ಮೇಲೆ ಅಷ್ಟೆಲ್ಲ ಬೆಲೆ ಬಾಳೋ ಫೋನ್ ತಲೆ ಮೇಲಿಂದ ಬೀಳ್ಸೋಕೆ ರೆಡಿ ಆಗ್ತಾರೆ?

ಓ ಕೆ.  ಆ ಮೆಸೇಜು ಬಂದಿದ್ದು ಜಿಯೋದಿಂದಾ. ಅವರು ಹೇಳ್ತಾ ಇರೋ ಸಮತೋಲನ ಇಂಗ್ಲಿಷಿನ ಬ್ಯಾಲೆನ್ಸ್.  ಕರೆನ್ಸಿ ಬ್ಯಾಲೆನ್ಸ್.

ಏನೋ ಬರೀಬೇಕು ಅಂತ ಸುಮ್ನೆ ತಲೆ ತಿಂದು ನಿಮ್ಮ ಸಮತೋಲನ ತಪ್ಪಿಸಿ ಬಿಟ್ನಾ?ಕ್ಷಮೆ ಇರಲಿ .

Comments

Popular posts from this blog

ಹೂಗಳು

ಎಮ್ಮೆ

Not for nation