ಒಂದು ಘಟನೆ
ಇದನ್ನು ನನ್ನ ನಿನ್ನೆಯ ಪೋಸ್ಟ್ “ politically correct ” ಗೇ ಸೇರಿಸಬೇಕಿತ್ತು. ಒಂದು ಸುದ್ದಿ - ಒಂದು ಘಟನೆ. ವಿದೇಶಿ ಪ್ರಸಿದ್ಧ ದೂರದರ್ಶನ ವಾಹಿನಿಯೊಂದು ಇಲ್ಲಿಯ ಪ್ರಮುಖ ವ್ಯಕ್ತಿಯೋರ್ವರ ಮೇಲೆ ಸಾಕ್ಷ್ಯ ಚಿತ್ರವೊಂದನ್ನು ತಯಾರಿಸಿ ಬಿತ್ತರಿಸಿತು. ಅದು ದುರುದ್ದೇಶದಿಂದ ತಯಾರಿಸಿದ ಸಂಪೂರ್ಣ ಸುಳ್ಳು ಎಂದು ನಮ್ಮಸರಕಾರ ಮತ್ತು ಅದರ ಹೊಗಳುಭಟರು ಹೇಳಿಕೊಂಡರು. ಮತ್ತು ಅದನ್ನು ಬ್ಯಾನ್ ಮಾಡಿದರು. ಆದರೆ ಮಕ್ಕಳಿರುತ್ತಾರೆ ನೋಡಿ, ಅವರಿಗೆ ಸತ್ಯ ಬೇಕು. ಭಯ ಕಮ್ಮಿ - ನಮ್ಮ ನಿಮ್ಮಂತಲ್ಲ. ಜವಾಹರಲಾಲ ನೆಹರು ವಿದ್ಯಾಲಯದ ವಿದ್ಯಾರ್ಥಿಗಳು ಬ್ಯಾನ್ ಆಗಿರುವ ಆ ಸಾಕ್ಷ್ಯಚಿತ್ರವನ್ನು ತಮ್ಮ ವಿದ್ಯಾಲಯದ ಆವರಣದಲ್ಲಿ ಪ್ರಸಾರ ಮಾಡಲು ಹೊಂಚಿಕೊಂಡರು. ಯುನಿವರ್ಸಿಟಿ ಬೇಡ ಎಂದಿರಬೇಕು. ಅವರು ಕೇಳಿರಲಿಕ್ಕಿಲ್ಲ. ಪ್ರಸಾರ ಮಾಡುವ ಅರ್ಧ ಗಂಟೆ ಮೊದಲು ವಿದ್ಯಾಲಯದ ಆವರಣದಲ್ಲೆಲ್ಲ ವಿದ್ಯುತ್ ಕಡಿತವಾಗಿಬಿಟ್ಟಿತು. ಇಂಟರ್ನೆಟ್ ಕೂಡ ಮಾಯವಾಯಿತು. ಆದರೂ ಆ ವಿದ್ಯಾರ್ಥಿಗಳೆಲ್ಲ ಕತ್ತಲೆಯಲ್ಲೇ ಕುಳಿತು ತಮ್ಮ ಮೊಬೈಲ್, ಲ್ಯಾಪ್ಟಾಪ್ಗಳಲ್ಲಿ ಸಾಕ್ಷ್ಯಚಿತ್ರವನ್ನು ನೋಡತೊಡಗಿದರು. ಎಲ್ಲಿಂದಲೋ ಕಲ್ಲು ತೂರಾಟ ಆರಂಭವಾಯಿತು. ಅದಕ್ಕೆ ಪ್ರತಿಕ್ರಿಯಸದ ವಿದ್ಯಾರ್ಥಿಗಳು ಪೋಲೀಸ್ ಕಛೇರಿಯತ್ತ ಆಫೀಸಿನತ್ತ ಮೆರವಣಿಗೆಯಲ್ಲಿ ಹೋಗತೊಡಗಿದರು. ನಂತರ ಸುಮಾರು ಮಧ್ಯರಾತ್ರಿಯಲ್ಲಿ ವಿದ್ಯುತ್ತು ಮರಳಿ ಬಂದಿತು....