Devavrata

 
ನವಜಾತ ಶಿಶುವ ಹೊಳೆಗೆಸೆದ  ಅಮ್ಮ
ನೂ ಅಪ್ಪನೂ ಆಗಿ ಸಾಕಿದ ತಂದೆಯೂ
ತನ್ನಷ್ಟೇ ಎತ್ತರದ ಮಗನೆದುರು
ಪ್ರೇಮ ರೋಗವೆಂದು ಅಳಲಿದಾಗ
ಏನು ಮಾಡಬೇಕಿತ್ತು ಈ ದೇವವ್ರತ
ಭೀಷ್ಮನಾಗದೇ ?

  ತೊಟ್ಟ  ಭೀಷ್ಮ  ಶಪಥವ
 ಹೊಗಳಿದಾಗ ಎದೆಯುಬ್ಬಿತ್ತು
 ಇಂತಹ   ತ್ಯಾಗಿ  ಮನೋ ನಿಗ್ರಹಿ
 ಇರಬಲ್ಲರೆ ?
 ಅರಿಯದ   ಮುಗುದ
 ಮಕ್ಕಳ  - ಅಪ್ಪನ  ಮಕ್ಕಳ ಸಾಕಿ
 ಸಲಹಿದೆ
 ರಾಜ ಕುವರಿಯರ ಗೆದ್ದು  ತಂದು
 ಅವರ  ಮದುವೆಯ  ಮಾಡಿದೇ 
 ಫಲ
  ಅಂಬೆಯ ಶಾಪ

 
 ಇಂದು  ಅವರ  ಮೊಮ್ಮಕ್ಕಳು
ಒಬ್ಬರನ್ನೊಬ್ಬರು  ಕೊಲ್ಲಲು  ಹೊರಟಾಗ
ಕಣ್ಣೀರು  ಹೊರಬಾರದು  ಬಾರದಿರದು 
ಇವರ ಪ್ರಶ್ನಿಸಲು ನಾನಿವರ
ಅಜ್ಜನೆ?
ಅಲ್ಲ, ಇವರು ನನ್ನ   ಸಂತಾನವಲ್ಲ.

  ಅಖಿಲ ಜೀವ  ಜನ್ತುಗಳೆಲ್ಲ
  ಸಂತಾನಕ್ಕಾಗಿಯೇ
  ಬದುಕಿ    ಸಾಯುವಾಗ
  ಯಾವ ಸಾರ್ಥಕತೆಗೆ
  ಈ ಪ್ರತಿಜ್ಞೆ?
  ಈ  ಬಾಳು ?  


Comments

Popular posts from this blog

ಹೂಗಳು

ಎಮ್ಮೆ

ಸೇಲ್